ದುಬೈ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನಿ ಸ್ಪಿನ್ನರ್ ಸೆಂಡ್ ಆಫ್ ವೀರ ಅಬ್ರಾರ್ ಅಹ್ಮದ್ ಗೆ ಟೀಂ ಇಂಡಿಯಾ ಹುಡುಗರು ಶೇಪ್ ಔಟ್ ಆಗುವಂತೆ ಟ್ರೋಲ್ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ರನ್ನು ಅಬ್ರಾರ್ ಔಟ್ ಮಾಡಿದ್ದರು. ಸಂಜು ವಿಕೆಟ್ ಕೀಳುತ್ತಿದ್ದಂತೇ ಅಬ್ರಾರ್ ಎಂದಿನಂತೇ ತಮ್ಮದೇ ಶೈಲಿಯಲ್ಲಿ ಪೆವಿಲಿಯನ್ ಗೆ ಹೋಗು ಎಂದು ತಲೆಯಾಡಿಸಿ ಸನ್ನೆ ಮಾಡಿದ್ದಾರೆ.
ಫೈನಲ್ ಪಂದ್ಯ ಗೆದ್ದ ಬಳಿಕ ಇದನ್ನೇ ಅರ್ಷ್ ದೀಪ್ ಸಿಂಗ್ ನೇತೃತ್ವದಲ್ಲಿ ಟೀಂ ಇಂಡಿಯಾ ಹುಡುಗರು ಸಂಜು ಸ್ಯಾಮ್ಸನ್ ರನ್ನು ಎದುರು ನಿಲ್ಲಿಸಿಕೊಂಡು ಅಬ್ರಾರ್ ಸೆಲೆಬ್ರೇಷನ್ ಶೈಲಿಯನ್ನು ಕಾಮಿಡಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.