ದುಬೈ: ಏಷ್ಯಾ ಕಪ್ ಕ್ರಿಕೆಟ್ ಫೈನ್‌ಲ್‌ಗೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. 41 ವರ್ಷಗಳ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮೊದಲ ಬಾರಿ ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಲಿದೆ. ಟೂರ್ನಿಯಲ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಪಾಕ್ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಇತ್ತ ಭಾರತ ಕೂಡ ಮೂರನೇ ಪಂದ್ಯದಲ್ಲೂ ಪಾರಮ್ಯ ಸಾಧಿಸುವ ಛಲದಲ್ಲಿದೆ.
ಹಸ್ತಲಾಗವ ಮಾಡದೆ ಮೈದಾನದಲ್ಲಿ ಕಿರಿಕಿರಿಗಳಿಂದ ಕೂಡಿದ್ದ ಹಿಂದಿನ ಎರಡೂ ಪಂದ್ಯಗಳು ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದವು. ಈ ನಡುವೆ ಐಸಿಸಿ ಕೆಲವು ಆಟಗಾರರಿಗೆ ದಂಡವನ್ನೂ ವಿಧಿಸಿ ಎಚ್ಚರಿಸಿತು. ಹೀಗಾಗಿ ಹೀಗಾಗಿ ಮೂರನೇ ಪಂದ್ಯದ ತೀವ್ರತೆ ಜೋರಾಗಿಯೇ ಇದೆ.
ಉಭಯ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯ. ಟೂರ್ನಿಯಲ್ಲೇ ಎರಡು ಸಲ ಸೋತ ಪಾಕಿಸ್ಥಾನಕ್ಕೆ ಇದು ಪ್ರತಿಷ್ಠೆಯ ಫೈನಲ್. ಮತ್ತೊಂದು ಸೋಲನುಭವಿಸಿ ತವರಿಗೆ ತೆರಳಿದ್ರೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುವುದು ನಿಶ್ಚಿತ. ಒಂದೇ ಸರಣಿಯಲ್ಲಿ ಭಾರತದಿಂದ ಮೂರು ಮುಖಭಂಗ ಕಲ್ಪಿಸಿಕೊಳ್ಳಲು ಪಾಕಿಗಳಿಂದ ಖಂಡಿತ ಸಾಧ್ಯವಿಲ್ಲ. ಭಾರತಕ್ಕೂ ಇದು ಮಹತ್ವದ ಪಂದ್ಯವಾಗಿದೆ.