ದುಬೈ : ಪಾಕಿಸ್ತಾನ ತಂಡವು ಗುರುವಾರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿದೆ. ಗುಂಪು ಹಂತ, ಸೂಪರ್ ಫೋರ್ ಹಂತದ ಬಳಿಕ ಟೂರ್ನಿಯಲ್ಲಿ ಮೂರನೇ ಬಾರಿ ಉಭಯ ತಂಡಗಳು ಸೆಣಸಾಡಲಿವೆ. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.
ಪಾಕ್ ತಂಡ ನೀಡಿದ್ದ 136 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡವು 9 ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಹ್ಯಾರಿಸ್ ರವೂಫ್ ಮೂರು ವಿಕೆಟ್ ಪಡೆದರೆ, ಸಯೀಮ್ ಅಯೂಬ್ ಎರಡು ವಿಕೆಟ್ ಗಳಿಸಿ ಗೆಲುವಿನಲ್ಲಿ ಮಿಂಚಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ದುಕೊಂಡಿತು. ಬೌಲರ್‌ಗಳು ಸಾಂಘಿಕ ನಿರ್ವಹಣೆ ತೋರಿ ಪಾಕ್ ತಂಡವನ್ನು 8 ವಿಕೆಟ್‌ಗೆ 135 ರನ್‌ಗಳಿಗೆ ನಿಯಂತ್ರಿಸಿದರು.