ದುಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲ್ಲಬೇಕೆಂದರೆ ಅಭಿಷೇಕ್ ಬಚ್ಚನ್ ಔಟ್ ಮಾಡಿದ್ರೆ ಸಾಕು ಎಂದು ಪಾಕಿಸ್ತಾನ ಮಾಜಿ ವೇಗಿ ಶೊಯೇಬ್ ಅಖ್ತರ್ ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಭಿಷೇಕ್ ಬಚ್ಚನ್ ರಿಪ್ಲೈ ಮಾತ್ರ ಸಖತ್ ಆಗಿದೆ.
ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಈ ಕೂಟದಲ್ಲಿ ಈ ಹಿಂದೆ ಎರಡು ಬಾರಿ ಪಾಕಿಸ್ತಾನವನ್ನು ಭಾರತ ಸೋಲಿಸಿದೆ. ಇದೀಗ ಮೂರನೆಯ ಬಾರಿಗೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಪಾಕಿಸ್ತಾನ ಕೂಡಾ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.
ಆದರೆ ಈ ಟೂರ್ನಿಯಲ್ಲಿ ಎಲ್ಲಾ ತಂಡಗಳಿಗೆ ಸಿಂಹ ಸ್ವಪ್ನರಾಗಿರುವುದು ಟೀಂ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ. ಇದೀಗ ಶೊಯೇಬ್ ಅಖ್ತರ್ ಪಾಕ್ ತಂಡಕ್ಕೆ ಸಲಹೆ ನೀಡುವಾಗ ಅಭಿಷೇಕ್ ಶರ್ಮಾ ಎನ್ನುವ ಬದಲು ನಟ ಅಭಿಷೇಕ್ ಬಚ್ಚನ್ ಔಟ್ ಮಾಡಿ ಎಂದು ಭಾರೀ ಟ್ರೋಲ್ ಗೊಳಗಾಗಿದ್ದಾರೆ.
ಇದಕ್ಕೆ ಸ್ವತಃ ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ. ಸರ್ ಗೌರವಪೂರ್ವಕವಾಗಿ ಹೇಳಬೇಕೆಂದರೆ ಅವರು ಅದನ್ನೂ ಸಾಧಿಸಲಾರರು ಎಂದು ನನಗನಿಸುತ್ತಿದೆ. ಅಷ್ಟೇ ಅಲ್ಲ, ನನಗೆ ಕ್ರಿಕೆಟ್ ಸಹ ಸರಿಯಾಗಿ ಆಡಲು ಬರಲ್ಲ ಎಂದಿದ್ದಾರೆ. ಅವರ ಈ ಟ್ರೋಲ್ ಈಗ ಭಾರೀ ವೈರಲ್ ಆಗಿದೆ.