ದುಬೈ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ 2 ಓವರ್ ಗಳಲ್ಲಿ ಭಾರತಕ್ಕೆ ಗೆಲ್ಲಲು 17 ರನ್ ಬೇಕಾಗಿದ್ದಾಗ ಪಾಕಿಸ್ತಾನ ಗೆಲುವು ತಡೆಯಲು ದೊಡ್ಡ ಸಂಚು ಮಾಡಿತ್ತು. ಆದರೆ ಇದನ್ನು ಭಾರತೀಯ ಆಟಗಾರರು ಒಂದೇ ಹೊಡೆತದಲ್ಲಿ ವಿಫಲಗೊಳಿಸಿದ್ದಾರೆ.
18 ನೇ ಓವರ್ ಮಾಡಲು ಬಂದ ಹ್ಯಾರಿಸ್ ರೌಫ್ ಬೌಲಿಂಗ್ ನಲ್ಲಿ ಕೊನೆಯ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಸಿಡಿಸಿದರು. ಈ ಸಿಕ್ಸರ್ ಒತ್ತಡದಲ್ಲಿದ್ದ ಭಾರತವನ್ನು ನಿರಾಳವಾಗಿಸಿತು. ಕೊನೆಯ ಎರಡು ಓವರ್ ಗಳಲ್ಲಿ ಭಾರತಕ್ಕೆ 17 ರನ್ ಗಳಿಸಿದರೆ ಸಾಕಿತ್ತು.
ಆಗ ಹ್ಯಾರಿಸ್ ರೌಫ್ ನಾಟಕ ಶುರುವಾಗಿತ್ತು. ಕಾಲು ನೋವಿಗೊಳಗಾದವರಂತೆ ನಾಟಕ ಮಾಡಿ ಕೆಳಕ್ಕೆ ಕುಸಿದು ಬಿದ್ದರು. ಕೊನೆಗೆ ಫಿಸಿಯೋ ಬಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಅಸಲಿಗೆ ಇದು ಆಟಗಾರರ ಸ್ಟ್ರಾಟಜಿಯಾಗಿರುತ್ತದೆ. ಒಂದು ಫ್ಲೋನಲ್ಲಿ ಪಂದ್ಯ ಸಾಗುತ್ತಿರುವಾಗ ಬ್ಯಾಟಿಗರ ಏಕಾಗ್ರತೆಗೆ ಭಂಗ ತರಲು ಸಮಯ ಕಳೆಯಲಾಗುತ್ತದೆ.
ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತದ ಪರವಾಗಿ ರಿಷಭ್ ಪಂತ್ ಇದೇ ರೀತಿ ನಾಟಕವಾಡಿದ್ದರು. ಇದೀಗ ಪಾಕಿಸ್ತಾನವೂ ಅದೇ ತಂತ್ರವನ್ನು ಕಾಪಿ ಮಾಡಲು ಹೋಗಿತ್ತು. ಆದರೆ ಭಾರತೀಯ ಆಟಗಾರರಿಗೆ ಇದ್ಯಾವುದೂ ಕ್ಯಾರೇ ಆಗಲಿಲ್ಲ. ಕೊನೆಯ ಓವರ್ ನಲ್ಲಿ ಪಂದ್ಯ ಗೆದ್ದೇಬಿಟ್ಟರು.