ಮುಂಬೈ: ಈ ವರ್ಷ ಯಾವ ಕ್ರೀಡಾಕೂಟಗಳೂ ನಿಗದಿತ ಸಮಯದಲ್ಲಿ ನಡೆಸಲು ಕೊರೋನಾ ಅಡ್ಡಿಯಾಗಿತ್ತು. ಇದೇ ಕಾರಣದಿಂದ ಭಾರತದ ಐಪಿಎಲ್ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳೂ ನಡೆದಿಲ್ಲ.
ಇದೀಗ ಇವೆರಡೂ ರಾಷ್ಟ್ರಗಳು ತಮ್ಮ ತಮ್ಮ ದೇಶದ ಕ್ರೀಡಾಕೂಟವನ್ನು ನಡೆಸಲು ಪರಸ್ಪರ ಗುದ್ದಾಟ ನಡೆಸಿವೆ. ಬಿಸಿಸಿಐ ಈಗಾಗಲೇ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಲು ಯೋಜನೆ ಹಾಕಿಕೊಂಡಿದೆ. ಅದರ ಜತೆಗೆ ಏಷ್ಯಾ ಕಪ್ ಕೂಡಾ ಆಯೋಜನೆಯಾಗಿದೆ.
ಇದರ ನಡುವೆ ಪಾಕಿಸ್ತಾನ ತನ್ನ ದೇಶದಲ್ಲಿ ನಡೆಯುವ ಪಿಎಸ್ಎಲ್ ಟೂರ್ನಮೆಂಟ್ ನ್ನು ನವಂಬರ್ ನಲ್ಲಿ ನಡೆಸುವ ತೀರ್ಮಾನ ನಡೆಸಿದೆ. ಆದರೆ ಇದರಿಂದಾಗಿ ಐಪಿಎಲ್ ಮತ್ತು ಏಷ್ಯಾ ಕಪ್ ವೇಳಾಪಟ್ಟಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪಿಎಸ್ಎಲ್ ಟೂರ್ನಮೆಂಟ್ ನ್ನು ಮುಂದಿನ ವರ್ಷ ನಡೆಸಲು ಮನವಿ ಮಾಡಿತ್ತು. ಆದರೆ ಭಾರತದ ಮನವಿಯನ್ನು ತಿರಸ್ಕರಿಸಿರುವ ಪಾಕ್ ಮಂಡಳಿ ನವಂಬರ್ ನಲ್ಲೇ ಪಿಎಸ್ಎಲ್ ನ ಬಾಕಿ ಉಳಿದ ಪಂದ್ಯಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಇದೀಗ ಎರಡೂ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.