Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಚೀನಾದ ವಿವೋ ಪ್ರಾಯೋಜಕತ್ವ ಕೊನೆಗೊಳಿಸಲು ಹಿಂದೇಟು ಹಾಕುತ್ತಿರುವ ಬಿಸಿಸಿಐ

ಐಪಿಎಲ್ ಗೆ ಚೀನಾದ ವಿವೋ ಪ್ರಾಯೋಜಕತ್ವ ಕೊನೆಗೊಳಿಸಲು ಹಿಂದೇಟು ಹಾಕುತ್ತಿರುವ ಬಿಸಿಸಿಐ
ಮುಂಬೈ , ಶುಕ್ರವಾರ, 3 ಜುಲೈ 2020 (09:07 IST)
ಮುಂಬೈ: ಗಡಿಯಲ್ಲಿ ಸಂಘರ್ಷ ನಡೆದ ಬಳಿಕ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗಿದೆ. ಕೇಂದ್ರ ಸರ್ಕಾರವೇ ದೇಶದಲ್ಲಿ ಚೀನಾ ಕಂಪನಿಗಳ ಆದಿಪತ್ಯ ಕೊನೆಗೊಳಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.


ಆದರೆ ಬಿಸಿಸಿಐ ಮಾತ್ರ ತನ್ನ ಜನಪ್ರಿಯ ಕ್ರೀಡಾಕೂಟ ಐಪಿಎಲ್ ಗೆ ಚೀನಾ ಮೂಲದ ವಿವೋ ಮೊಬೈಲ್ಸ್ ಕಂಪನಿಗೆ ನೀಡಲಾಗಿದ್ದ ಮುಖ್ಯ ಪ್ರಾಯೋಜಕತ್ವ ಒಪ್ಪಂದ ರದ್ದು ಮಾಡಲು ಹಿಂದೇಟು ಹಾಕುತ್ತಿದೆ.

ಚೀನಾ ಬಹಿಷ್ಕಾರದ ಕೂಗಿನ ಬೆನ್ನಲ್ಲೇ ನೆಟ್ಟಿಗರು ಐಪಿಎಲ್ ನಿಂದಲೂ ವಿವೋ ಪ್ರಾಯಜಕತ್ವಕ್ಕೆ ಬಿಸಿಸಿಐ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಕೂಡಾ ಸಭೆ ಕರೆದು ಚರ್ಚಿಸುವುದಾಗಿ ಹೇಳಿತ್ತು. ಆದರೆ ಪ್ರತಿ ವರ್ಷಕ್ಕೆ 440 ಕೋಟಿ ರೂ.ನಂತೆ ಒಪ್ಪಂದ ಮಾಡಿಕೊಂಡಿರುವ ವಿವೋ ಕಂಪನಿಯ ಒಪ್ಪಂದ ರದ್ದು ಪಡಿಸಲು ಬಿಸಿಸಿಐಗೇ ಇಷ್ಟವಿಲ್ಲ ಎಂದು ಮೂಲಗಳು ಹೇಳುತ್ತಿವೆ. 2022 ಕ್ಕೆ ವಿವೋ ಪ್ರಾಯೋಜಕತ್ವ ಕೊನೆಗೊಳ್ಳಲಿದ್ದು, ಅಲ್ಲಿಯವರೆಗೆ ಐಪಿಎಲ್ ಗೆ ಚೀನಾ ಕಂಪನಿ ಪ್ರಮುಖ ಪ್ರಾಯೋಜಕರಾಗಿ ಮುಂದುವರಿಯುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಅಂತರ ಕಾಯ್ದುಕೊಂಡು ವಿಕೆಟ್ ಸೆಲೆಬ್ರೇಷನ್ ಮಾಡಿ ಟ್ರೆಂಡ್ ಸೃಷ್ಟಿಸಿದ ಇಂಗ್ಲೆಂಡ್ ಕ್ರಿಕೆಟಿಗರು