Publish Date: Mon, 29 Jun 2020 (10:10 IST)
Updated Date: Mon, 29 Jun 2020 (10:13 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಬೇಕಾದರೆ ತರಬೇತಿ ಕ್ಯಾಂಪ್ ಆಯೋಜಿಸುವುದು ಅನಿವಾರ್ಯ. ಆದರೆ ಯಾವಾಗ ಎಂಬ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಡಕ್ ನಿರ್ಧಾರ ಪ್ರಕಟಿಸಿದ್ದಾರೆ.
ಸದ್ಯಕ್ಕೆ ಲಾಕ್ ಡೌನ್ ನಿಯಮ ಸಡಿಲಗೊಂಡರೂ ದೇಶದಲ್ಲಿ ಕೊರೋನಾ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ಆಗಸ್ಟ್ ವರೆಗೂ ತರಬೇತಿ ಕ್ಯಾಂಪ್ ಆಯೋಜಿಸುವ ಪ್ರಶ್ನೆಯೇ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಹೀಗಾಗಿ ಸದ್ಯಕ್ಕಂತೂ ಟೀಂ ಇಂಡಿಯಾ ಯಾವುದೇ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗಂಗೂಲಿ ಸುಳಿವು ನೀಡಿದ್ದಾರೆ. ಪರಿಸ್ಥಿತಿ ಸುಧಾರಣೆಯಾಗದೇ ಪಂದ್ಯವಾಗಲೀ, ತರಬೇತಿ ಕ್ಯಾಂಪ್ ಆಗಲೀ ಆಯೋಜಿಸಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.