Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಕೊರೋನಾ ಹಿನ್ನಲೆ: ವಿದೇಶದಲ್ಲಿ ಐಪಿಎಲ್ 13 ಆಯೋಜನೆಗೆ ಸಿದ್ಧತೆ

ಭಾರತದಲ್ಲಿ ಕೊರೋನಾ ಹಿನ್ನಲೆ: ವಿದೇಶದಲ್ಲಿ ಐಪಿಎಲ್ 13 ಆಯೋಜನೆಗೆ ಸಿದ್ಧತೆ
ಮುಂಬೈ , ಶುಕ್ರವಾರ, 3 ಜುಲೈ 2020 (09:16 IST)
ಮುಂಬೈ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣದಿಂದಾಗಿ ಎಂದೋ ನಡೆಯಬೇಕಿದ್ದ ಐಪಿಎಲ್ 13 ನೇ ಆವೃತ್ತಿ ಇನ್ನೂ ಆಯೋಜಿಸಲು ಬಿಸಿಸಿಐಗೆ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು.


ಹಾಗಂತ ಈ ಬಾರಿಯ ಕೂಟವನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ 4 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹೇಳಿದ್ದಾರೆ.

ಹೀಗಾಗಿ ಆ ನಷ್ಟವಾಗದಂತೆ ನೋಡಿಕೊಳ್ಳಲು ಬಿಸಿಸಿಐ ವಿದೇಶ ತಾಣದಲ್ಲಿಯಾದರೂ ಸರಿಯೇ ಐಪಿಎಲ್ ನಡೆಸಲು ಯೋಜನೆ ನಡೆಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾ ಅಥವಾ ಯುಎಇ ದೇಶದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಈಗಾಗಲೇ ಎರಡೂ ರಾಷ್ಟ್ರಗಳು ತಾವು ಐಪಿಎಲ್ ಆಯೋಜಿಸಲು ರೆಡಿ ಎಂದಿವೆ. ಈ ದೇಶಗಳಲ್ಲಿ ಕೊರೋನಾ ನಿಯಂತ್ರಣದಲ್ಲಿರುವುದರಿಂದ ಬಿಸಿಸಿಐ ಈ ನಿಟ್ಟಿನಲ್ಲಿ ತಯಾರಿ ನಡೆಸಿದೆ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಸದ್ಯದಲ್ಲೇ ಈ ಎರಡು ರಾಷ್ಟ್ರಗಳ ಪೈಕಿ ಎಲ್ಲಿ ಐಪಿಎಲ್ 13 ಆಯೋಜಿಸಬೇಕೆಂದು ಬಿಸಿಸಿಐ ತೀರ್ಮಾನಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆ ಚೀನಾದ ವಿವೋ ಪ್ರಾಯೋಜಕತ್ವ ಕೊನೆಗೊಳಿಸಲು ಹಿಂದೇಟು ಹಾಕುತ್ತಿರುವ ಬಿಸಿಸಿಐ