Publish Date: Fri, 03 Jul 2020 (09:50 IST)
Updated Date: Fri, 03 Jul 2020 (09:53 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಥಾ ಫಿಟ್ನೆಸ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಬಿಡುವು ಸಿಕ್ಕಾಗಲೆಲ್ಲಾ ಕೊಹ್ಲಿ ವರ್ಕೌಟ್ ಮಾಡುತ್ತಲೇ ಇರುತ್ತಾರೆ.
ಇದೀಗ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಕೌಟ್ ವಿಡಿಯೋ ಒಂದನ್ನು ಪ್ರಕಟಿಸಿದ್ದು ಇದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಕಪ್ಪೆಯಂತೆ ಹಾರುತ್ತಾ ಪುಷ್ ಅಪ್ ವರ್ಕೌಟ್ ಮಾಡುವ ವಿಡಿಯೋವನ್ನು ಪ್ರಕಟಿಸಿದ್ದರು. ಇದರಿಂದ ಪ್ರೇರಿತರಾದ ಕೊಹ್ಲಿ ಈಗ ಆ ವರ್ಕೌಟ್ ಚಾಲೆಂಜ್ ಗೆ ಕೊಂಚ ಟ್ವಿಸ್ಟ್ ಕೊಟ್ಟಿದ್ದು ಹಾರಿ ಪುಷ್ ಅಪ್ ಮಾಡುವಾಗ ನೆಲಕ್ಕೆ ಕೈ ಸೋಕಿಸುವ ಮೊದಲು ಚಪ್ಪಾಳೆ ತಟ್ಟುವ ಕಠಿಣ ವರ್ಕೌಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ರೀತಿ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಕೊಹ್ಲಿಯ ಪರಾಕ್ರಮವನ್ನು ಎಲ್ಲರೂ ಕೊಂಡಾಡಿದ್ದಾರೆ.