Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಕೈಲಿ ಕಾಫಿ ಕಪ್: ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ

ಕೆಎಲ್ ರಾಹುಲ್ ಕೈಲಿ ಕಾಫಿ ಕಪ್: ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 1 ಜುಲೈ 2020 (09:47 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಸಹ ಆಟಗಾರರನ್ನು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡುವುದರಲ್ಲಿ ಎತ್ತಿದ ಕೈ.


ಮೊನ್ನೆಯಷ್ಟೇ ಕೇರಂ ಆಡುತ್ತಿದ್ದ ಹಾರ್ದಿಕ್ ಪಾಂಡ್ಯರನ್ನು ತಮಾಷೆ ಮಾಡಿದ್ದ ಕೊಹ್ಲಿ ಈಗ ಕಾಫಿ ಕಪ್ ಹಿಡಿದುಕೊಂಡಿರುವ ಫೋಟೋ ಪ್ರಕಟಿಸಿದ ಕೆಎಲ್ ರಾಹುಲ್ ರನ್ನು ಟ್ರೋಲ್ ಮಾಡಿದ್ದಾರೆ.

ರಾಹುಲ್ ಹಿಂದೊಮ್ಮೆ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಸೆಕ್ಸಿಯೆಷ್ಟ್ ಕಾಮೆಂಟ್ ಮಾಡಿದ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದರು. ಅದೇ ವಿಚಾರವನ್ನಿಟ್ಟುಕೊಂಡು ಕೊಹ್ಲಿ, ರಾಹುಲ್ ರನ್ನು ತಮಾಷೆ ಮಾಡಿದ್ದಾರೆ.
‘ಕಪ್ ಕೊಳಕಾಗಿದೆ’ ಎಂದು ರಾಹುಲ್ ಗೆ ಕೊಹ್ಲಿ ಟಾಂಗ್ ನೀಡಿದ್ದಾರೆ. ಇವರ ಈ ಕಾಮೆಂಟ್ ಗೆ ಭಾರೀ ಲೈಕ್ಸ್ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಟ್ರೋಲ್ ಆಗಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್!