ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
									
										
								
																	
ಇದರೊಂದಿಗೆ ಈ ಸರಣಿಯಲ್ಲಿ ಮೂರೂ ಬಾರಿಯೂ ಆಸ್ಟ್ರೇಲಿಯಾವೇ ಟಾಸ್ ಗೆದ್ದಂತಾಗಿದೆ. ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಗಳಿಸಿರುವ ಉಭಯ ತಂಡಗಳಿಗೆ ಇಂದು ಫೈನಲ್ ಪಂದ್ಯವಾಗಿರಲಿದೆ. ಇಂದು ಗೆದ್ದ ತಂಡ ಸರಣಿ ತನ್ನದಾಗಿಸಿಕೊಳ್ಳಲಿದೆ.
									
			
			 
 			
 
 			
			                     
							
							
			        							
								
																	ಈ ಪಂದ್ಯಕ್ಕೆ ಭಾರತ ತಂಡಕ್ಕೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅದರಲ್ಲೂ ಕೆಎಲ್ ರಾಹುಲ್ ರನ್ನು ತಂಡದಿಂದ ಹೊರಗಿಟ್ಟಿಲ್ಲ. ಅವರು ಕಳೆದ ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದಾರೆ. ಅದೂ ಅಲ್ಲದೆ ತವರಿನ ಪ್ರೇಕ್ಷಕರ ಎದುರು ಚೆನ್ನಾಗಿ ಆಡಲಿ ಎಂದು ಕೊಹ್ಲಿ ಹೇಳಿದ್ದಾರೆ.