Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಇಂದಿನಿಂದ

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಇಂದಿನಿಂದ
ಅಹಮ್ಮದಾಬಾದ್ , ಗುರುವಾರ, 9 ಮಾರ್ಚ್ 2023 (08:20 IST)
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಈ ಪಂದ್ಯ ಗೆದ್ದರೆ ಮಾತ್ರ ಟೀಂ ಇಂಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡಬಹುದಾಗಿದೆ. ಅಲ್ಲದೆ ಸರಣಿ ಗೆಲ್ಲಬೇಕಾದರೂ ಇಂದಿನ ಪಂದ್ಯ ಗೆಲ್ಲಲೇಬೇಕು.

ಭಾರತ ತಂಡ ಈ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ನೀಡಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡಲಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. ಈ ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್: ಸುಧಾರಿಸದ ಆರ್ ಸಿಬಿ ಬೌಲಿಂಗ್, 201 ರನ್ ಗಳಿಸಿದ ಗುಜರಾತ್