Publish Date: Thu, 09 Feb 2023 (08:30 IST)
Updated Date: Thu, 09 Feb 2023 (08:49 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ನಾಗ್ಪುರದಲ್ಲಿ ಆರಂಭವಾಗಲಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಲಿದೆ. ಈ ಟೆಸ್ಟ್ ಸರಣಿ ಗೆದ್ದರಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಗಿಟ್ಟಿಸಲಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಹಿನ್ನಲೆ ನೋಡುವುದಾದರೆ ಇದುವರೆಗೂ ಭಾರತವೇ ಮೇಲುಗೈ ಸಾಧಿಸಿದೆ. ಅದರಲ್ಲೂ ಭಾರತದಲ್ಲಿ ಆಸೀಸ್ ಕೇವಲ ಒಮ್ಮೆ ಮಾತ್ರ ಸರಣಿ ಗೆದ್ದಿದೆ. ಈಗ ಭಾರತದ ಫಾರ್ಮ್ ಕೂಡಾ ಅತ್ಯುತ್ತಮವಾಗಿದೆ. ಒಂದೇ ಒಂದು ಕೊರತೆ ಎಂದರೆ ಆಸೀಸ್ ವಿರುದ್ಧ ಸದಾ ಅತ್ಯುತ್ತಮ ಪ್ರದರ್ಶನ ನೀಡುವ ರಿಷಬ್ ಪಂತ್ ಮಿಸ್ ಆಗಿದ್ದಾರೆ. ಅತ್ತ ಆಸ್ಟ್ರೇಲಿಯಾ ತಂಡದಲ್ಲೂ ಭಾರತಕ್ಕೆ ಕಾಡುವ ಸ್ಟೀವ್ ಸ್ಮಿತ್, ನಥನ್ ಲಿಯಾನ್ ಇದ್ದಾರೆ. ಹೀಗಾಗಿ ಭಾರತವೂ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಈ ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗುತ್ತಿದೆ.