Select Your Language

Notifications

webdunia
webdunia
webdunia
webdunia

IND vs SA T20: ಟೀಂ ಇಂಡಿಯಾ, ಸೌತ್ ಆಫ್ರಿಕಾ ಪಂದ್ಯವನ್ನು ಎಲ್ಲಿ ಎಷ್ಟು ಗಂಟೆಗೆ ವೀಕ್ಷಿಸಬೇಕು ಇಲ್ಲಿದೆ ವಿವರ

Suryakumar Yadav-Sanju Samson

Krishnaveni K

ಕಿಂಗ್ಸ್ ಮೇಡ್ , ಶುಕ್ರವಾರ, 8 ನವೆಂಬರ್ 2024 (08:09 IST)
Photo Credit: X
ಕಿಂಗ್ಸ್ ಮೇಡ್: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಬೇಸರದಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳಿಗೆ ಈಗ ಯುವಕರ ತಂಡದಿಂದ ಟಿ20 ರಸದೌತಣ ಸಿಗಲಿದೆ. ಇಂದಿನಿಂದ ಭಾರತ ಮತ್ತು ದ ಆಫ್ರಿಕಾ ನಡುವೆ ಟಿ20 ಸರಣಿ ಆರಂಭವಾಗಲಿದೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಯುವಕರ ತಂಡ ಈಗಾಗಲೇ ಆಸ್ಟ್ರೇಲಿಯಾ, ಶ್ರೀಲಂಕಾದಂತಹ ತಂಡಗಳ ಎದುರು ಗೆದ್ದು ಬೀಗಿದೆ. ಇದೀಗ ದ ಆಫ್ರಿಕಾ ವಿರುದ್ಧವೂ ಅಂತಹದ್ದೇ ಒಂದು ಬ್ಲಾಕ್ ಬ್ಲಸ್ಟರ್ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಭಾರತ ತಂಡದಲ್ಲಿ ನಾಯಕ ಸೂರ್ಯಕುಮಾರ್ ನಿಂದ ಹಿಡಿದು ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ ರಂತಹ ಟಿ20 ಸ್ಪೆಷಲಿಸ್ಟ್ ಗಳಿದ್ದಾರೆ.

ಅಭಿಷೇಕ್ ಶರ್ಮ ಮತ್ತು ಸಂಜು ಸ್ಯಾಮ್ಸನ್ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸ್ಯಾಮ್ಸನ್ ತಂಡದಲ್ಲಿರುವುದರಿಂದ ಅವರೇ ವಿಕೆಟ್ ಕೀಪರ್ ಆಗಲಿದ್ದು ಜಿತೇಶ್ ಶರ್ಮ ಹೊರಗುಳಿಯಬೇಕಾದೀತು. ತಿಲಕ್ ವರ್ಮ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಬಹುದು. ಇನ್ನು ಬೌಲಿಂಗ್ ನಲ್ಲಿ ಟಿ20 ಸ್ಪೆಷಲಿಸ್ಟ್ ವೇಗಿ ಅರ್ಷ್ ದೀಪ್ ಸಿಂಗ್, ಆವೇಶ್ ಖಾನ್ ಜೊತೆಯಾಗಬಹುದು.

ಅತ್ತ ದ ಆಫ್ರಿಕಾ ತಂಡವೂ ಟಿ20 ಫಾರ್ಮ್ಯಾಟ್ ನಲ್ಲಿ ದುರ್ಬಲವೇನೂ ಅಲ್ಲ. ಸ್ಪೋಟಕ ದಾಂಡಿಗರ ಪಡೆಯೇ ಆ ತಂಡದಲ್ಲಿದೆ. ಜೊತೆಗೆ ತವರಿನ ಅಂಕಣದಲ್ಲಿ ಆಡುವುದರಿಂದ ಆಫ್ರಿಕಾ ಬಲಿಷ್ಠವಾಗಿದೆ. ಭಾರತೀಯ ಕಾಲಮಾನ ಪ್ರಕಾರ ಇಂದಿನ ಈ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವುದಕ್ಕೆ ಆ ಕೌಟುಂಬಿಕ ಕಾರಣವೇನೆಂದು ಬಯಲು