Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವುದಕ್ಕೆ ಆ ಕೌಟುಂಬಿಕ ಕಾರಣವೇನೆಂದು ಬಯಲು

Rohit Sharma-Ritika

Krishnaveni K

ಮುಂಬೈ , ಗುರುವಾರ, 7 ನವೆಂಬರ್ 2024 (15:28 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಕೌಟುಂಬಿಕ ಕಾರಣ ನೀಡಿ ಅಲಭ್ಯರಾಗುವುದಾಗಿ ಹೇಳಿದ್ದಾರೆ. ಆದರೆ ಆ ಕಾರಣವೇನು ಎಂಬುದು ಈಗ ಬಯಲಾಗಿದೆ.

ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನವೇ ರೋಹಿತ್ ತಾವು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿರುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲೂ ರೋಹಿತ್ ‘ನನಗೆ ಮೊದಲ ಪಂದ್ಯದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೋ ಎಂದು ಈಗಲೇ ಹೇಳಲಾಗದು’ ಎಂದಿದ್ದರು.

ಹಾಗಿದ್ದರೆ ರೋಹಿತ್ ಯಾವ ಕಾರಣಕ್ಕೆ ಗೈರಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಅದರ ಸುಳಿವು ದೊರೆತಿದೆ. ರೋಹಿತ್ ಮತ್ತು ರಿತಿಕಾ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದ್ದು, ಪತ್ನಿಯ ಹೆರಿಗೆ ನಿಮಿತ್ತ ರೋಹಿತ್ ಕ್ರಿಕೆಟ್ ನಿಂದ ಬಿಡುವು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಯಾವುದೇ ಟೂರ್ನಿಯಲ್ಲೂ ರಿತಿಕಾ ಮೈದಾನದಲ್ಲಿ ಪತಿ ಆಡುವುದನ್ನು ನೋಡಲು ಬಂದಿಲ್ಲ. ಇದರ ಜೊತೆಗೆ ಈಗ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಏರಾನ್ ಫಿಂಚ್ ಕಾಮೆಂಟ್ ನಲ್ಲಿ ಅದು ಖಚಿತವಾಗಿದೆ. ಇತ್ತೀಚೆಗೆ ಸುನಿಲ್ ಗವಾಸ್ಕರ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಲಿದ್ದಾರೆ ಎಂದರೆ ಎಲ್ಲಾ ಪಂದ್ಯಗಳಿಗೂ ಹೊಸ ನಾಯಕನನ್ನೇ ಆಯ್ಕೆ ಮಾಡಬೇಕು ಎಂದಿದ್ದರು.

ಅವರ ಕಾಮೆಂಟ್ ಗೆ ತಿರುಗೇಟು ನೀಡಿದ್ದ ಏರಾನ್ ಫಿಂಚ್ ‘ಸುನಿಲ್ ಹೇಳಿರುವುದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ‘ನಿಮ್ಮ ಪತ್ನಿ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನುವಾಗ ಕುಟುಂಬದ ಜೊತೆಗಿರಬೇಕು ಎಂದರೆ ಅದು ಸುಂದರ ಕ್ಷಣ. ಅಂತಹ ಪರಿಸ್ಥಿತಿಯಲ್ಲಿ ನೀವು ಕುಟುಂಬಕ್ಕಾಗಿ ಸಮಯ ನೀಡಲೇಬೇಕಾಗುತ್ತದೆ’ ಎಂದು ಫಿಂಚ್ ಹೇಳಿದ್ದು, ಇದರಿಂದ ರೋಹಿತ್ ಮತ್ತೆ ತಂದೆಯಾಗುತ್ತಿರುವುದು ಕನ್ ಫರ್ಮ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರೆಂದು ಕನ್ ಫರ್ಮ್