ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿರುವ ಪುಣೆಯ ಪಿಚ್ ನ್ನು ಟೀಂ ಇಂಡಿಯಾಕ್ಕೆ ಬೇಕಾದಂತೆಯೇ ತಯಾರಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಭಾರತ 8 ವಿಕೆಟ್ ಗಳಿಂದ ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇದು ಡಬ್ಲ್ಯಟಿಸಿ ಅಂಕಪಟ್ಟಿಯ ದೃಷ್ಟಿಯಿಂದಲೂ ಭಾರತಕ್ಕೆ ಹಿನ್ನಡೆ ತಂದುಕೊಟ್ಟಿದೆ. ಹೀಗಾಗಿ ಈಗ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟ್ರ್ಯಾಕ್ ಸ್ಪಿನ್ನರ್ ಗಳಿಗೆ ಹೆಚ್ಚು ಉಪಯೋಗ ನೀಡಿರಲಿಲ್ಲ. ಹೀಗಾಗಿ ಭಾರತೀಯ ಬೌಲರ್ ಗಳಿಗೆ ಎದುರಾಳಿಗಳನ್ನು ನಿಯಂತ್ರಿಸುವುದು ಕಷ್ಟವಾಯಿತು. ಇದೀಗ ಅಕ್ಟೋಬರ್ 24 ರಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಪುಣೆ ಪಿಚ್ ಸ್ಪಿನ್ ಸ್ನೇಹಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಹೆಚ್ಚು ಬೌನ್ಸ್ ಇಲ್ಲದ, ಟರ್ನರ್ ವಿಕೆಟ್ ನ್ನು ತಯಾರಿಸಲಾಗುತ್ತಿದೆ ಎನ್ನಲಾಗುತ್ತಿದೆ. ಮೊದಲ ಟೆಸ್ಟ್ ಸೋತ ಬೆನ್ನಲ್ಲೇ ಎರಡನೇ ಟೆಸ್ಟ್ ಪಂದ್ಯದ ಪಿಚ್ ಸ್ಪಿನ್ ಸ್ನೇಹಿಯಾಗುವುದು ನಿರೀಕ್ಷಿತವಾಗಿತ್ತು. ಅದರಂತೆ ಈಗ ಅತಿಥೇಯ ತಂಡಕ್ಕೆ ಅನುಕೂಲವಾಗುವಂತಹ ಪಿಚ್ ನ್ನೇ ತಯಾರಿಸಲಾಗುತ್ತಿದೆ.