IND vs NZ Test: ಮುಂದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಕಿಕ್ ಔಟ್

Krishnaveni K
ಸೋಮವಾರ, 21 ಅಕ್ಟೋಬರ್ 2024 (08:40 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲೂ ವಿಫಲರಾಗಿರುವ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ರನ್ನು ಮುಂದಿನ ಪಂದ್ಯಕ್ಕೆ ಆಡುವ ಬಳಗದಿಂದಲೇ ಹೊರಗಿಟ್ಟರೂ ಅಚ್ಚರಿಯಿಲ್ಲ.

ಕೆಎಲ್ ರಾಹುಲ್ ಗೆ ಈಗಾಗಲೇ ನಾಯಕ ರೋಹಿತ್ ಶರ್ಮಾ ಇದು ಕೊನೆಯ ಅವಕಾಶ ಎನ್ನುವ ರೀತಿಯಲ್ಲಿ ಬಾಂಗ್ಲಾದೇಶ ಸರಣಿಯಲ್ಲಿ ಆಡಿದ್ದರು. ಇತ್ತೀಚೆಗಿನ ದಿನಗಳಲ್ಲಿ ಅವರಿಂದ ತಂಡಕ್ಕೆ ಬೇಕಾಗಿದ್ದಾಗ ಒಂದೇ ಒಂದು ಉತ್ತಮ ಇನಿಂಗ್ಸ್ ಬಂದಿಲ್ಲ. ಈ ಬಾರಿ ಅವರು ತವರು ಕ್ರೀಡಾಂಗಣದಲ್ಲೇ ಮುಗ್ಗರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಾದರೂ ಅವರು ಉತ್ತಮ ಆಟವಾಡಬಹುದು ಎಂದು ನಿರೀಕ್ಷೆಯಾಗಿತ್ತು. ಆದರೆ ತಂಡ ಸಂಕಷ್ಟದಲ್ಲಿದ್ದಾಗಲೂ ಆಡಿಲ್ಲ. ಇತ್ತ ಅವರ ಫೀಲ್ಡಿಂಗ್ ಕೂಡಾ ಕಳಪೆಯಾಗಿತ್ತು. ಹೀಗಾಗಿ ಅವರನ್ನು ಮುಂದಿನ ಪಂದ್ಯಕ್ಕೆ ಕೈ  ಬಿಟ್ಟರೂ ಅಚ್ಚರಿಯಿಲ್ಲ.

ಯಾಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಈಗಾಗಲೇ ಸರ್ಫರಾಜ್ ಖಾನ್ ಅದ್ಭುತ ಶತಕದ ಮೂಲಕ ತಮ್ಮ ಸ್ಥಾನ ಭದ್ರಪಡಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕಿತ್ತು ಹಾಕುವಂತೆಯೇ ಇಲ್ಲ. ಇದರ ಜೊತೆಗೆ ಮುಂದಿನ ಪಂದ್ಯಕ್ಕೆ ಶುಬ್ಮನ್ ಗಿಲ್ ತಂಡಕ್ಕೆ ಬಂದರೆ ಕೆಎಲ್ ರಾಹುಲ್ ಗೆ ಕೊಕ್ ನೀಡುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಐಪಿಎಲ್ 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ಮುಂದಿನ ಸುದ್ದಿ
Show comments