ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸೀಸ್ ಬ್ಯಾಟಿಗ ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಂದು ಇಬ್ಬರೂ ಮೈದಾನದಲ್ಲಿ ಪ್ಯಾಚ್ ಅಪ್ ಮಾಡಿಕೊಂಡಿದ್ದಾರೆ.
ನಿನ್ನೆಯ ಘಟನೆ ಬಗ್ಗೆ ಸಂದರ್ಶನದಲ್ಲಿ ಟ್ರಾವಿಸ್ ಹೆಡ್ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ನಾನು ಸಿರಾಜ್ ಗೆ ಚೆನ್ನಾಗಿ ಬೌಲ್ ಮಾಡಿದೆ ಎಂದಿದ್ದೆ. ಆದರೆ ಅವರು ತಪ್ಪು ತಿಳಿದು ನಿಂದಿಸಿದರು ಎಂದಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ಸಿರಾಜ್ ಅವರು ಸುಳ್ಳು ಹೇಳುತ್ತಿದ್ದಾರೆ, ಮೊದಲು ಅವರೇ ನನ್ನನ್ನು ನಿಂದಿಸಿದ್ದರು ಅದಕ್ಕೇ ನಾನು ತಿರುಗೇಟು ನೀಡಿದ್ದೆ ಎಂದಿದ್ದರು.
ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇಂದು ಸಿರಾಜ್ ಬ್ಯಾಟಿಂಗ್ ಗೆ ಬಂದಾಗ ಇಬ್ಬರೂ ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾನು ನಿಜವಾಗಿ ನಿಮ್ಮನ್ನು ನಿಂದಿಸಲಿಲ್ಲ ಎಂದು ಟ್ರಾವಿಸ್ ಹೇಳಿದರೆ, ಸಿರಾಜ್ ಕೂಡಾ ನಾನು ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದಿರಿ ಎಂದು ಹೇಳಿದ್ದೆ ಅಷ್ಟೇ ಎಂದಿದ್ದಾರೆ. ಇದಕ್ಕೆ ಟ್ರಾವಿಸ್ ಕೂಡಾ ಕೂಲ್ ಎಂದಿದ್ದಾರೆ.
ಈ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಗೆಲುವಿನ ನಂತರ ಪರಸ್ಪರ ಆಟಗಾರರು ಕೈಕುಲುಕುವ ವೇಳೆ ಮತ್ತೊಮ್ಮೆ ಇಬ್ಬರೂ ಪರಸ್ಪರ ಶೇಕ್ ಹ್ಯಾಂಡ್ ಮಾಡಿ ತಬ್ಬಿಕೊಂಡು ಹಳೆಯ ಘಟನೆಯನ್ನು ಮರೆತು ಮುನ್ನಡೆದಿದ್ದಾರೆ.