IND vs AUS: ವಿಕೆಟ್ ಮೇಲೆ ವಿಕೆಟ್ ಬಿದ್ದರೂ ಅಭಿಷೇಕ್ ಶರ್ಮಾಗೆ ಕ್ಯಾರೇ ಇಲ್ಲ

Krishnaveni K
ಶುಕ್ರವಾರ, 31 ಅಕ್ಟೋಬರ್ 2025 (14:59 IST)
Photo Credit: X
ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ವಿಕೆಟ್ ಮೇಲೆ ವಿಕೆಟ್ ಬಿದ್ದರೂ ತನಗೆ ಕ್ಯಾರೇ ಇಲ್ಲ ಎನ್ನುವಂತೆ ಆಡುತ್ತಿದ್ದಾರೆ ಅಭಿಷೇಕ್ ಶರ್ಮಾ.

ಟಾಸ್ ಸೋತ ಟೀಂ ಇಂಡಿಯಾ ಇಂದು ಮೊದಲು ಬ್ಯಾಟಿಂಗ್ ಮಾಡುತ್ತಿದೆ. 10 ಓವರ್ ಗೆ ಮೊದಲೇ ಭಾರತದ ಟಾಪ್ ಆರ್ಡರ್ ಬ್ಯಾಟಿಗರೆಲ್ಲರೂ ಏಕಂಕಿಗೆ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಗಿಲ್ 5, ಸಂಜು ಸ್ಯಾಮ್ಸನ್ 2, ಸೂರ್ಯಕುಮಾರ್ ಯಾದವ್ 1, ತಿಲಕ್ ವರ್ಮ 0, ಅಕ್ಸರ್ ಪಟೇಲ್ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಭಾರತ 5 ವಿಕೆಟ್ ಉದುರಿಸಿಕೊಂಡು ಕೇವಲ 86 ರನ್ ಗಳಿಸಿ ಸಂಕಷ್ಟದಲ್ಲಿದೆ.

ಆದರೆ ಉಳಿದವರು ಎಷ್ಟೇ ಹೀನಾಯವಾಗಿ ಆಡಲಿ, ಅಭಿಷೇಕ್ ಶರ್ಮಾ ಮಾತ್ರ ತಾವು ಬೇರೆಯೇ ಪಿಚ್ ನಲ್ಲಿ ಆಡುತ್ತಿರುವವರಂತೆ ತಮ್ಮ ಎಂದಿನ ಹೊಡೆಬಡಿಯ ಶೈಲಿಯ ಆಟವಾಡುತ್ತಿದ್ದಾರೆ.

ಎಂದಿನಂತೆ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿರುವುದಲ್ಲದೆ, ತಂಡದ ಒತ್ತಡವನ್ನೂ ಕಡಿಮೆ ಮಾಡುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಅವರು 23 ಎಸೆತ ಎದುರಿಸಿ 50 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಹರ್ಷಿತ್ ರಾಣಾ 18 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

INDW vs AUSW: ಎಷ್ಟು ಸಲ ನೋಡಿದ್ರೂ ಕಣ್ತುಂಬಿ ಬರುವ ವಿಡಿಯೋ ಇದು

INDW vs AUSW: ಅಂದು ಗಂಭೀರ್, ಇಂದು ಜೆಮಿಮಾ: ವಿಶ್ವಕಪ್ ನಲ್ಲಿ ಕಲೆ ಒಳ್ಳೆಯದೇ

IND vs AUS T20: ಭಾರತ, ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯ, ಲೈವ್ ಸಮಯ ಇಲ್ಲಿದೆ ನೋಡಿ

India vs Australia: ಶಹಬ್ಬಾಸ್‌, ಜೆಮಿಮಾ ರಾಡ್ರಿಗಸ್ ಅಬ್ಬರಕ್ಕೆ ಮಕಾಡೆ ಮಲಗಿದ ಆಸ್ಟ್ರೇಲಿಯಾ

ಮುಂದಿನ ಸುದ್ದಿ
Show comments