Select Your Language

Notifications

webdunia
webdunia
webdunia
webdunia

ಮೋದಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಬಹುದು, ಟೀಂ ಇಂಡಿಯಾ ಹೋದರೆ ತಪ್ಪೇನು

Tejashwi Surya

Krishnaveni K

ನವದೆಹಲಿ , ಶುಕ್ರವಾರ, 29 ನವೆಂಬರ್ 2024 (10:40 IST)
ನವದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾವನ್ನು ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡದೇ ಇರುವುದಕ್ಕೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.

ಮುಂದಿನ ವರ್ಷದಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ಟೀಂ ಇಂಡಿಯಾವನ್ನು ಕಳುಹಿಸಲು ಕೇಂದ್ರ ಸರ್ಕಾರ ಭದ್ರತಾ ಕಾರಣಗಳಿಂದ ಒಪ್ಪಿಗೆ ನೀಡುತ್ತಿಲ್ಲ ಕೇಂದ್ರ ಸರ್ಕಾರ ಒಪ್ಪಿಗೆ ನೀಡದ ಕಾರಣಕ್ಕೆ ಬಿಸಿಸಿಐ ಕೂಡಾ ತಂಡವನ್ನು ಕಳುಹಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಟೀಂ ಇಂಡಿಯಾ ಬಾರದೇ ಇದ್ದರೆ ಟೂರ್ನಿಗೆ ಭಾರೀ ನಷ್ಟವಾಗಲಿದ್ದು, ಐಸಿಸಿ ಕೂಡಾ ಪಾಕಿಸ್ತಾನಕ್ಕೆ ಭಾರತ ಆಡಲಿರುವ ಪಂದ್ಯವನ್ನು ಬೇರೆ ರಾಷ್ಟ್ರಕ್ಕೆ ಸ್ಥಳಾಂತರಿಸಲು ಒತ್ತಡ ಹೇರುತ್ತಿದೆ.

ಈ ಎಲ್ಲಾ ಗೊಂದಲಗಳಿಂದಾಗಿ ಇನ್ನೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ‘ಕ್ರೀಡೆಗೆ ರಾಜಕೀಯ ಬೆರೆಸಬಾರದು. ನಾವು ಹೋಗಬೇಕು, ಬೇರೆ ತಂಡಗಳೂ ಭಾರತಕ್ಕೆ ಬರಬೇಕು. ಒಲಿಂಪಿಕ್ಸ್ ನಲ್ಲಿ ಎಲ್ಲರೂ ಭಾಗಿಯಾಗಲ್ವಾ? ಭಾರತ ತಂಡ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು? ಅದಕ್ಕೆ ಸಮಸ್ಯೆಯೇನು? ಒಂದು ವೇಳೆ ಪ್ರಧಾನ ಮಂತ್ರಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ಸವಿದು ಬರಬಹುದು ಎಂದರೆ ಟೀಂ ಇಂಡಿಯಾ ಕ್ರಿಕೆಟ್ ಆಡುವುದಕ್ಕೆ ಆ ದೇಶಕ್ಕೆ ಹೋಗಿ ಬರಲು ಸಮಸ್ಯೆಯೇನು?’ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

ಇಂದು ಐಸಿಸಿ ಸಭೆ ನಡೆಯಲಿದ್ದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಮಾತ್ರ ನಡೆಸುವುದೇ ಅಥವಾ ಭಾರತ ಆಡುವ ಪಂದ್ಯಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೇ ಎನ್ನುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Robin Uttappa: ಹಣ ಗಳಿಸುವುದಕ್ಕೆ ಮಾತ್ರ ನಿಮಗೆ ಭಾರತ ಬೇಕು: ರಾಬಿನ್ ಉತ್ತಪ್ಪಗೆ ನೆಟ್ಟಿಗರ ತರಾಟೆ