ಕೊರೋನಾ ಇಫೆಕ್ಟ್: ಮಹಿಳಾ, ಪುರುಷ ಟಿ20 ವಿಶ್ವಕಪ್ ನ ಈ ಪಂದ್ಯಗಳನ್ನು ಮುಂದೂಡಿದ ಐಸಿಸಿ

ಬುಧವಾರ, 13 ಮೇ 2020 (09:28 IST)
ಸಿಡ್ನಿ: ಜಗತ್ತಿನಾದ್ಯಂತ ಕೊರೋನಾದಿಂದಾಗಿ ಕ್ರೀಡಾಕೂಟಗಳು ನಡೆಯುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಸೆಪ್ಟೆಂಬರ್ ನಿಂದ ನವಂಬರ್ ವರೆಗೆ ನಡೆಯಲಿರುವ ಟಿ20 ಮಹಿಳಾ ಮತ್ತು ಪುರುಷರ ವಿಶ್ವಕಪ್ ಕ್ರಿಕೆಟ್ ಕೂಟದಲ್ಲೂ ಬದಲಾವಣೆಯಾಗಿದೆ.


ವಿಶ್ವಕಪ್ ಗೆ ಮೊದಲು ನಡೆಯಬೇಕಿದ್ದ ಅರ್ಹತಾ ಪಂದ್ಯಗಳನ್ನು ಐಸಿಸಿ ಅನಿವಾರ್ಯವಾಗಿ ಮುಂದೂಡಿಕೆ ಮಾಡಿದೆ. ಜೂನ್-ಜುಲೈ ಅವಧಿಯಲ್ಲಿ ಪಂದ್ಯಗಳು ನಡೆಯಬೇಕಿತ್ತು.

ಮಹಿಳೆಯರ ಟಿ20 ವಿಶ್ವಕಪ್ ಬಳಿಕ ಪುರುಷರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆದರೆ ವಿಶ್ವಕಪ್ ವೇಳಾಪಟ್ಟಿಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ಐಸಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹೇಶ್ ಬಾಬು ಬಳಿಕ ಅಲ್ಲು ಅರ್ಜುನ್ ಹಾಡಿಗೆ ಡೇವಿಡ್ ವಾರ್ನರ್ ಭರ್ಜರಿ ಸ್ಟೆಪ್