ಮುಂಬೈ: ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ಮಹಿಳೆಯರಿಗೆ ಈಗ ಐಪಿಎಲ್ ಪರ್ವದ ಸಂಭ್ರಮ.
ಹರ್ಮನ್ ಪ್ರೀತ್ ಕೌರ್ ಮತ್ತು ಪಡೆ ಈಗ ಭಾರತಕ್ಕೆ ಬಂದಿಳಿದಿದ್ದು, ಒಬ್ಬೊಬ್ಬರಾಗಿ ತಮ್ಮ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕಿಯಾಗಿ ಆಯ್ಕೆಯಾಗಿರುವ ಹರ್ಮನ್ ಪ್ರೀತ್ ಕೌರ್ ಈಗ ತಮ್ಮ ತಂಡ ಕೂಡಿಕೊಂಡಿದ್ದಾರೆ.
ಹರ್ಮನ್ ಭಾರತಕ್ಕೆ ಬಂದಿಳಿದ ತಕ್ಷಣವೇ ಐಪಿಎಲ್ ತಂಡ ಸೇರಿಕೊಂಡಿದ್ದಾರೆ. ಇನ್ನೀಗ ಸ್ಮೃತಿ ಮಂಧನಾ ಸೇರಿದಂತೆ ಇತರೇ ಆಟಗಾರರು ತಮ್ಮ ತಮ್ಮ ಸೇರಿಕೊಳ್ಳಬೇಕಾಗಿದೆ.