Select Your Language

Notifications

webdunia
webdunia
webdunia
webdunia

ಧೋನಿ ರನೌಟ್, ಹರ್ಮನ್ ಪ್ರೀತ್ ಕೌರ್ ರನೌಟ್ ನಡುವೆ ಹೋಲಿಕೆ ಮಾಡಿದ ನೆಟ್ಟಿಗರು

ಧೋನಿ ರನೌಟ್, ಹರ್ಮನ್ ಪ್ರೀತ್ ಕೌರ್ ರನೌಟ್ ನಡುವೆ ಹೋಲಿಕೆ ಮಾಡಿದ ನೆಟ್ಟಿಗರು
ಕೇಪ್ ಟೌನ್ , ಶನಿವಾರ, 25 ಫೆಬ್ರವರಿ 2023 (08:50 IST)
Photo Courtesy: Twitter
ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಕೊನೆಯ ಕ್ಷಣದಲ್ಲಿ ಸೋತು ನಿರಾಸೆ ಅನುಭವಿಸಿತ್ತು.

ಗೆಲುವಿನ ಹಾದಿಯಲ್ಲಿದ್ದ ಭಾರತ ಸೋಲಲು ಕಾರಣವಾಗಿದ್ದು ಉತ್ತಮವಾಗಿ ಆಡುತ್ತಿದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ರನೌಟ್. ಬ್ಯಾಟ್ ನೆಲಕ್ಕೆ ಎಡವಿ ಸೂಕ್ತ ಸಮಯದಲ್ಲಿ ಗೆರೆ ತಲುಪಲು ವಿಫಲವಾದ ಹರ್ಮನ್ ರನೌಟ್ ಆಗಿದ್ದರಿಂದ ಭಾರತದ ಪತನ ಆರಂಭವಾಯಿತು.

ಆಗ ಹರ್ಮನ್ 52 ರನ್ ಗಳಿಸಿ ಆಡುತ್ತಿದ್ದರು. ಒಂದು ವೇಳೆ ಅವರು ಕೊನೆಯವರೆಗೂ ಇರುತ್ತಿದ್ದರೆ ನಿಸ್ಸಂಶಯವಾಗಿ ಭಾರತ ಗೆಲ್ಲುತ್ತಿತ್ತು. ಆದರೆ ಕೊನೆಗೆ 5 ರನ್ ಗಳಿಂದ ಸೋಲಬೇಕಾಯಿತು.

ಈ ಸೋಲಿನ ಬಳಿಕ ನೆಟ್ಟಿಗರು ಧೋನಿ ಈ ಹಿಂದೆ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಉತ್ತಮವಾಗಿ ಆಡುತ್ತಿದ್ದಾಗ ರನೌಟ್ ಆಗುವುದರ ನಿರಾಸೆ ಅನುಭವಿಸಿದ್ದರು. ಇದು ಧೋನಿ ಕೊನೆಯ ವಿಶ್ವಕಪ್ ಆಗಿತ್ತು. ಹೀಗಾಗಿ ಧೋನಿ ಭಾವುಕರಾಗಿ ಪೆವಿಲಿಯನ್ ಗೆ ಮರಳಿದ್ದರು. ಬಹುಶಃ ಅಂದು ಧೋನಿ ರನೌಟ್ ಆಗದೇ ಇದ್ದಿದ್ದರೆ ಪಂದ್ಯದ ಫಲಿತಾಂಶ ಬದಲಾಗುತ್ತಿತ್ತೇನೋ.

ಹೀಗಾಗಿ ನೆಟ್ಟಿಗರು ಇಂದು ಹರ್ಮನ್ ಪ್ರೀತ್ ಕೌರ್ ರನೌಟ್ ನ್ನು ಅಂದಿನ ಧೋನಿ ರನೌಟ್ ಗೆ ಹೋಲಿಸಿದ್ದಾರೆ. ಎರಡೂ ರನೌಟ್ ಗಳನ್ನೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲಾರರು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಪಿಲ್ ದೇವ್