Publish Date: Fri, 24 Feb 2023 (09:30 IST)
Updated Date: Fri, 24 Feb 2023 (09:41 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನೆ ಎತ್ತಿದ್ದಾರೆ.
ನಾಯಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಿರುವ ಕಪಿಲ್ ದೇವ್ ರೋಹಿತ್ ದೇಹ ತೂಕ ಹೆಚ್ಚುತ್ತಿದೆ ಎಂದಿದ್ದಾರೆ.
ತಂಡದ ನಾಯಕರಾಗಿರುವವರು ಹೆಚ್ಚು ಫಿಟ್ ಆಗಿರಬೇಕು. ರೋಹಿತ್ ಇತ್ತೀಚೆಗೆ ದೇಹ ತೂಕ ಹೆಚ್ಚಿಸಿಕೊಂಡಿದ್ದಾರೆ ಎನಿಸುತ್ತದೆ. ಅವರು ಕೊಹ್ಲಿಯನ್ನು ನೋಡಿ ಕಲಿಯಬೇಕು. ಕೊಹ್ಲಿ ಫಿಟ್ ಆಗಿದ್ದಾರೆ. ನಾಯಕನಾದವರು ಫಿಟ್ನೆಸ್ ಬಗ್ಗೆ ಗಮನ ಕೊಡದೇ ಇದ್ದರೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.