Publish Date: Thu, 23 Feb 2023 (10:47 IST)
Updated Date: Thu, 23 Feb 2023 (10:49 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಷ್ಟೋ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ. ಎಷ್ಟೋ ಆಟಗಾರರ ವೃತ್ತಿ ಜೀವನಕ್ಕೆ ನೆರವಾಗಿದ್ದಾರೆ.
ಇದೀಗ ಕೊಹ್ಲಿ ಆರ್ ಸಿಬಿ ನಾಯಕರಾಗಿದ್ದಾಗ ಇಂದಿನ ಸ್ಟಾರ್ ವೇಗಿಯಾಗಿರುವ ಮೊಹಮ್ಮದ್ ಸಿರಾಜ್ ರನ್ನು ಕಾಪಾಡಿದ ವಿಚಾರವನ್ನು ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.
ಮೊಹಮ್ಮದ್ ಸಿರಾಜ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೂ ರನ್ ಬಿಟ್ಟುಕೊಡುತ್ತಾರೆ ಎಂಬ ಕಾರಣಕ್ಕೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಅವರನ್ನು ಕೈ ಬಿಡಲು ತೀರ್ಮಾನಿಸಿತ್ತು. ಆದರೆ ಕೊಹ್ಲಿ ಅವರ ಪರವಾಗಿ ನಿಂತಿದ್ದರು. ಸಿರಾಜ್ ನನ್ನ ಆಡುವ ಬಳಗದಲ್ಲಿರಬೇಕು ಎಂದು ಬೆಂಬಲಿಸಿದ್ದರು. ಹೀಗಾಗಿ ಸಿರಾಜ್ ಗೆ ತಂಡದಲ್ಲಿ ಸ್ಥಾನ ಭದ್ರವಾಯಿತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದರು.