Publish Date: Sat, 25 Feb 2023 (15:16 IST)
Updated Date: Sat, 25 Feb 2023 (15:18 IST)
ಮುಂಬೈ: ಮಹಿಳಾ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಕೇವಲ 5 ರನ್ ಗಳಿಂದ ಸೆಮಿಫೈನಲ್ ಸೋತ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಕಣ್ಣೀರು ಮಿಡಿದಿದ್ದರು. ಇದೀಗ ಟ್ವಿಟರ್ ಮೂಲಕ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ವಿಶ್ವಕಪ್ ಕೂಟದಲ್ಲಿ ನಮ್ಮನ್ನು ಬೆಂಬಲಿಸಿದ ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ಒಬ್ಬ ಅಭಿಮಾನಿಯಾಗಿ ನಿಮ್ಮ ತಂಡ ಸೋಲುವುದನ್ನು ಕಾಣಲು ಕಷ್ಟವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನಾವು ಮತ್ತೆ ಪುಟಿದೇಳುತ್ತೇವೆ ಎಂದು ನಿಮಗೆ ಭರವಸೆ ಕೊಡಲಷ್ಟೇ ನನ್ನಿಂದ ಈಗ ಸಾಧ‍್ಯ' ಎಂದಿದ್ದಾರೆ ಹರ್ಮನ್.
Krishnaveni K
Publish Date: Sat, 25 Feb 2023 (15:16 IST)
Updated Date: Sat, 25 Feb 2023 (15:18 IST)