Publish Date: Mon, 27 Feb 2023 (09:20 IST)
Updated Date: Mon, 27 Feb 2023 (09:40 IST)
ಮುಂಬೈ: ದೇಶೀಯ ಕ್ರಿಕೆಟ್ ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದರೂ ಸರ್ಫರಾಜ್ ಖಾನ್ ರನ್ನು ಟೀಂ ಇಂಡಿಯಾಕ್ಕೆ ಪರಿಗಣಿಸದೇ ಇರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್ ಸರಣಿಗೆ ತಂಡ ಪ್ರಕಟವಾದಾಗ ಸರ್ಫರಾಜ್ ಖಾನ್ ಆಯ್ಕೆಯಾಗಲಿಲ್ಲವೆಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಫರಾಜ್ ರಣಜಿಯಲ್ಲಿ ಉತ್ತಮ ರನ್ ಗಳಿಸಿದ್ದರು. ಹಾಗಿದ್ದರೂ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಆದರೆ ಅಸಲಿಗೆ ಸರ್ಫರಾಜ್ ಖಾನ್ ಬೆರಳಿನ ಗಾಯಕ್ಕೊಳಗಾಗಿದ್ದು, ಇನ್ನು 10 ದಿನ ವಿಶ್ರಾಂತಿ ಪಡೆಯಬೇಕಾಗಿತ್ತು. ಹೀಗಾಗಿ ಅವರನ್ನು ಪರಿಗಣಿಸಲಿಲ್ಲ ಎನ್ನಲಾಗಿದೆ.