ಬೆಂಗಳೂರು: ಐಪಿಎಲ್ 2023 ರ ಲಕ್ನೋ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ಸೋತಿದೆ.
ಥ್ರಿಲ್ಲರ್ ಪಂದ್ಯದಲ್ಲಿ ಗೆದ್ದ ಬಳಿಕ ಲಕ್ನೋ ಕೋಚ್ ಗೌತಮ್ ಗಂಭೀರ್ ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕರನ್ನು ಉದ್ದೇಶಿಸಿ ಸೈಲೆನ್ಸ್ ಎಂದು ಅಗ್ರೆಸಿವ್ ಆಗಿ ಸನ್ನೆ ಮಾಡಿದ್ದಾರೆ.
ಕೊನೆಯ ಓವರ್ ನಲ್ಲಿ 4 ರನ್ ಬೇಕಾಗಿದ್ದಾಗ ಇಡೀ ಮೈದಾನದಲ್ಲಿದ್ದ ಪ್ರೇಕ್ಷಕರು ಆರ್ ಸಿಬಿ ಎಂದು ಕೂಗಿ ತವರಿನ ತಂಡಕ್ಕೆ ಪ್ರೋತ್ಸಾಹ ಕೊಡುತ್ತಿತ್ತು. ಹೀಗಾಗಿ ಪಂದ್ಯ ಮುಗಿದ ಬಳಿಕ ಗಂಭೀರ್ ಫ್ಯಾನ್ಸ್ ಗೆ ಸೈಲೆಂಟ್ ಆಗಿರಿ ಎಂದು ಸನ್ನೆ ಮಾಡಿದ್ದಾರೆ. ಗಂಭೀರ್ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.