Select Your Language

Notifications

webdunia
webdunia
webdunia
webdunia

ಇಂದಿನಿಂದ ಟೀಂ ಇಂಡಿಯಾದಲ್ಲಿ ಗೌತಮ್ ಗಂಭೀರ್ ಹವಾ ಶುರು

Gautam Gambhir

Krishnaveni K

ಮುಂಬೈ , ಸೋಮವಾರ, 22 ಜುಲೈ 2024 (08:47 IST)
ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ಇಂದಿನಿಂದ ಅಧಿಕೃತವಾಗಿ ಕೋಚ್ ಆಗಿ ತಂಡದ ಜೊತೆಗೆ ತಮ್ಮ ಕರ್ತವ್ಯ ಆರಂಭಿಸಲಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಇಂದು ಟೀಂ ಇಂಡಿಯಾ ದ್ವೀಪ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದೆ. ಇದಕ್ಕೆ ಮೊದಲು ಗಂಭೀರ್ ಮತ್ತು ನೂತನ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕೋಚ್ ಆಗಿ ಇದು ಗಂಭೀರ್ ಗೆ ಮೊದಲ ಸರಣಿಯಾಗಿರುವುದರಿಂದ ತಮ್ಮ ಯೋಜನೆಗಳ ಬಗ್ಗೆ, ತಂಡದ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮನಬಿಚ್ಚಿ ಮಾತನಾಡಲಿದ್ದಾರೆ. ಇದಕ್ಕೆ ಮೊದಲು ದ್ರಾವಿಡ್ ಕೂಡಾ ಕೋಚ್ ಆದ ಬಳಿಕ ತಮ್ಮ ಮೊದಲ ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.

ಇಂದು ಟಿ20 ಸರಣಿಗಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ಮೊದಲ ತಂಡ ಲಂಕಾಗೆ ಪ್ರಯಾಣ ಬೆಳೆಸಲಿದೆ. ಜುಲೈ 27 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಆಡಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಮತ್ತೊಂದು ಬಳಗ ಲಂಕಾಗೆ ಪ್ರಯಾಣ ಬೆಳೆಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಲಿಕುರ್ಚಿಯಲ್ಲಿ ಬಂದ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂದಾನ