ಮುಂಬೈ: ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ಇಂಡಿನ್ ಲೆಜೆಂಡ್ಸ್ ತಂಡದ ನಾಯಕರಾಗಿರುವ ಸಚಿನ್ ತೆಂಡುಲ್ಕರ್ ಪ್ರತೀ ಪಂದ್ಯದಲ್ಲಿ ತೋರುತ್ತಿರುವ ಬ್ಯಾಟಿಂಗ್ ಪ್ರದರ್ಶನ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಭರ್ಜರಿ ಸಿಕ್ಸರ್, ಬೌಂಡರಿಗಳಿಂದ ಹಳೆಯ ದಿನಗಳನ್ನು ನೆನಪಿಸುತ್ತಿರುವ ಸಚಿನ್ ತೆಂಡುಲ್ಕರ್ ರನ್ನು ಮತ್ತೆ ತಂಡಕ್ಕೆ ಕರೆಸಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಈಗಿರುವ ಕೆಲವು ಆಟಗಾರರಿಗಿಂತ ಸಚಿನ್ ಈ ವಯಸ್ಸಿನಲ್ಲೂ ಬೆಸ್ಟ್ ಫಾರ್ಮ್ ನಲ್ಲಿದ್ದಾರೆ. ಅವರನ್ನು ಮುಂಬರುವ ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿ ಎಂದು ಕೆಲವರು ಆಗ್ರಹಿಸಿದ್ದಾರೆ.