Publish Date: Fri, 23 Sep 2022 (08:30 IST)
Updated Date: Fri, 23 Sep 2022 (08:55 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಬಳಗದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು.
ಬೌಲಿಂಗ್ ವೈಫಲ್ಯ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಕಳೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾರನ್ನು ತಂಡ ಆಡಿಸಿರಲಿಲ್ಲ. ಈ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆಯಿದೆ. ಯಜುವೇಂದ್ರ ಚಾಹಲ್ ಬದಲಿಗೆ ಅನುಭವಿ ಅಶ್ವಿನ್ ಗೆ ಸ್ಥಾನ ನೀಡಿದರೂ ಅಚ್ಚರಿಯಲ್ಲ. ಅಶ್ವಿನ್ ತಂಡಕ್ಕೆ ಬಂದಲ್ಲಿ ಬ್ಯಾಟಿಂಗ್ ಕೂಡಾ ಮಾಡಬಲ್ಲರು.
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿರಲಿಲ್ಲ. ಹೀಗಾಗಿ ಅವರ ಬದಲಿಗೆ ಮತ್ತೆ ರಿಷಬ್ ಪಂತ್ ಗೆ ಅವಕಾಶ ನೀಡಬಹುದು. ಉಳಿದಂತೆ ತಂಡದಲ್ಲಿ ಬದಲಾವಣೆ ಸಾಧ‍್ಯತೆಯಿಲ್ಲ.