Publish Date: Fri, 23 Sep 2022 (08:20 IST)
Updated Date: Fri, 23 Sep 2022 (08:52 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಎರಡನೇ ಟಿ20 ಪಂದ್ಯ ನಾಗ್ಪುರದ ವಿಸಿಎ ಮೈದಾನದಲ್ಲಿ ನಡೆಯಲಿದೆ.
ಈಗಾಗಲೇ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಇಂದು ಸೋತರೆ ಸರಣಿ ಕಳೆದುಕೊಳ್ಳಲಿದೆ.
ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿರುವುದು ಬೌಲರ್ ಗಳು ಮತ್ತು ಫೀಲ್ಡರ್ ಗಳ ವೈಫಲ್ಯ. ಬ್ಯಾಟಿಂಗ್ ಸದೃಢವಾಗಿದ್ದು, ಪ್ರಮುಖ ಬೌಲರ್ ಗಳು ವಿಕೆಟ್ ಕೀಳಲು ವಿಫಲವಾಗುತ್ತಿರುವುದೇ ಭಾರತಕ್ಕೆ ತಲೆನೋವಾಗಿದೆ. ಈ ಹುಳುಕು ಸರಿಪಡಿಸದೇ ಹೋದರೆ ಟೀಂ ಇಂಡಿಯಾಗೆ ಭವಿಷ್ಯದಲ್ಲೂ ಕಷ್ಟವಾಗಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.