Select Your Language

Notifications

webdunia
webdunia
webdunia
webdunia

2017 ರ ವಿಶ್ವಕಪ್ ಇನಿಂಗ್ಸ್ ನೆನಪಿಸಿದ ಹರ್ಮನ್ ಪ್ರೀತ್ ಶತಕ: ಭಾರತ ಮಹಿಳೆಯರಿಗೆ ಸರಣಿ ಜಯ

2017 ರ ವಿಶ್ವಕಪ್ ಇನಿಂಗ್ಸ್ ನೆನಪಿಸಿದ ಹರ್ಮನ್ ಪ್ರೀತ್ ಶತಕ: ಭಾರತ ಮಹಿಳೆಯರಿಗೆ ಸರಣಿ ಜಯ
ಕ್ಯಾಂಟ್ ಬರಿ , ಗುರುವಾರ, 22 ಸೆಪ್ಟಂಬರ್ 2022 (08:50 IST)
ಕ್ಯಾಂಟ್ ಬರಿ: ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವೆ ನಡೆದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿ 88 ರನ್ ಗಳಿಂದ ಗೆಲ್ಲುವುದರ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್ ಗಳ ಬೃಹತ್ ಮೊತ್ತ ಪೇರಿಸಿತು. ನಾಯಕಿ ಹರ್ಮನ್ ಪ್ರೀತ್ ಕೌರ್ ಕೇವಲ 111 ಎಸೆತಗಳಿಂದ 4 ಸಿಕ್ಸರ್, 18 ಬೌಂಡರಿ ಸಹಿತ 143 ರನ್ ಚಚ್ಚಿದರು. ಅವರ ಈ ಇನಿಂಗ್ಸ್ 2017 ರ ಏಕದಿನ ವಿಶ್ವಕಪ್ ನಲ್ಲಿ ಸಿಡಿಸಿದ್ದ ಶತಕವನ್ನು ನೆನಪಿಸಿತು. ಸ್ಮೃತಿ ಮಂಧನಾ 40, ಹರ್ಲಿನ್ ಡಿಯೋಲ್ 58, ಯಶಿಕಾ ಭಾಟಿಯಾ 26 ರನ್ ಗಳಿಸಿ ಮಿಂಚಿದರು.

ಈ ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ 44.2 ಓವರ್ ಗಳಲ್ಲಿ 245 ರನ್ ಗಳಿಗೆ ಆಲೌಟ್ ಆಯಿತು. ಡೇನಿಯಲ್ ವ್ಯಾಟ್ 65, ಆಮಿ ಜೋನ್ಸ್ 39 ಚಾರ್ಲೆಟ್ ಡೀನ್ 37 ರನ್ ಗಳ ಕೊಡುಗೆ ನೀಡಿದರು. ಭಾರತದ ಪರ ರೇಣುಕಾ ಸಿಂಗ್ 4 ದಯಾಳನ್ ಹೇಮಲತಾ 2 ಮತ್ತು ದೀಪ್ತಿ ಶರ್ಮಾ, ಶಫಾಲಿ ವರ್ಮ ತಲಾ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಫೀಲ್ಡಿಂಗ್, ಬೌಲಿಂಗ್ ನದ್ದೇ ಚಿಂತೆ