Publish Date: Wed, 21 Sep 2022 (11:46 IST)
Updated Date: Wed, 21 Sep 2022 (11:48 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ಕಟು ಟೀಕೆ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡರ್ ಗಳು ಮೂರು ಸುಲಭ ಕ್ಯಾಚ್ ಕೈ ಚೆಲ್ಲಿದ್ದರು. ಇದರ ಬಗ್ಗೆ ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ತೀವ್ರ ಟೀಕೆ ಮಾಡಿದ್ದಾರೆ.
ಈಗಿನ ಟೀಂ ಇಂಡಿಯಾ ಫೀಲ್ಡಿಂಗ್ ನೋಡಿದರೆ ವಿಶ್ವದ ಯಾವುದೇ ಟಾಪ್ ತಂಡಗಳ ಸನಿಹವೂ ಇಲ್ಲ. ಎಲ್ಲಿ ಹೋಯ್ತು ಫೀಲ್ಡಿಂಗ್ ಜಾಣ್ಮೆ? ಈ ಯುವ ತಂಡದಲ್ಲಿ ಫೀಲ್ಡಿಂಗ್ ನಲ್ಲಿರಬೇಕಾದ ಚುರುಕುತನ ಮಿಸ್ಸಿಂಗ್ ಆಗಿದೆ. ಇದು ದೊಡ್ಡ ಟೂರ್ನಮೆಂಟ್ ನಲ್ಲಿ ಭಾರೀ ಪರಿಣಾಮ ಬೀರಲಿದೆ ಎಂದು ರವಿಶಾಸ್ತ್ರಿ ಎಚ್ಚರಿಸಿದ್ದಾರೆ.