ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಆಸೀಸ್ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 208 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಹಾಗಿದ್ದರೂ ಬೌಲರ್ ಗಳ ವೈಫಲ್ಯದಿಂದಾಗಿ ಎದುರಾಳಿಗಳು ಈ ಮೊತ್ತವನ್ನು 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್ ಗಳಿಸುವ ಮೂಲಕ ಗೆಲುವು ಕಂಡರು. ಆಸ್ಟ್ರೇಲಿಯಾ ಪರ ಕ್ಯಾಮರೂನ್ ಗ್ರೀನ್ 61, ಸ್ಟೀವ್ ಸ್ಮಿತ್ 35, ಮ್ಯಾಥ್ಯೂ ವೇಡ್ 45 ರನ್ ಗಳಿಸಿದರು.
ಭಾರತಕ್ಕೆಎಲ್ಲಕ್ಕಿಂತ ಮುಖ್ಯವಾಗಿ ಕೈಕೊಟ್ಟಿದ್ದ ಪ್ರಮುಖ ಬೌಲರ್ ಗಳು ಭುವನೇಶ್ವರ್ ಕುಮಾರ್ ನಾಲ್ಕು ಓವರ್ ಗಳ ಕೋಟಾದಲ್ಲಿ ವಿಕೆಟ್ ಇದಲ್ಲೇ 52 ರನ್ ಬಿಟ್ಟುಕೊಟ್ಟರೆ ಹರ್ಷಲ್ ಪಟೇಲ್ 49 ರನ್ ನೀಡಿದರು. ಯಜುವೇಂದ್ರ ಚಾಹಲ್ 1 ವಿಕೆಟ್ ಕಿತ್ತರೂ 3.5 ಓವರ್ ಗಳಲ್ಲಿ 42 ರನ್ ಬಿಟ್ಟುಕೊಟ್ಟರು. ಪರಿಣಾಮಕಾರಿ ಬೌಲಿಂಗ್ ನಡೆಸಿದ್ದು ಅಕ್ಸರ್ ಪಟೇಲ್ ಅವರು ಕೇವಲ 17 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. 2 ವಿಕೆಟ್ ಉಮೇಶ್ ಯಾದವ್ ಪಾಲಾಯಿತು.