Publish Date: Tue, 20 Sep 2022 (19:52 IST)
Updated Date: Tue, 20 Sep 2022 (19:55 IST)
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಿಗ್ಗಜ ಬ್ಯಾಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಪಡೆ ಇತ್ತೀಚೆಗಿನ ವರದಿ ಬಂದಾಗ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ86 ರನ್ ಗಳಿಸಿದೆ. ಕೆಎಲ್ ರಾಹಲ್ 47, ಸೂರ್ಯಕುಮಾರ್ ಯಾದವ್ 23 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಆದರೆ ಏಷ್ಯಾ ಕಪ್ ನ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಇಂದು ಕೇವಲ 2 ರನ್ ಗೆ ಔಟಾದರೆ ರೋಹಿತ್ ಶರ್ಮಾ 11 ರನ್ ಗೆ ಔಟಾಗಿ ಮತ್ತೆ ಕಳಪೆ ಮೊತ್ತದ ಸಾಧನೆ ಮಾಡಿದರು.