Publish Date: Wed, 21 Sep 2022 (09:27 IST)
Updated Date: Wed, 21 Sep 2022 (09:29 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಡಿಆರ್ ಎಸ್ ಮನವಿ ವಿಫಲವಾಗಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಸಿಟ್ಟಾಗಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರ ಕುತ್ತಿಗೆ ಹಿಡಿದು ಸಿಟ್ಟು ತೀರಿಸಿಕೊಂಡ ಘಟನೆ ನಡೆದಿದೆ.
ಆದರೆ ಇದೆಲ್ಲಾ ರೋಹಿತ್ ಮಾಡಿದ್ದು ತಮಾಷೆಯಾಗಿ. ಮೊದಲು ಯಜುವೇಂದ್ರ ಚಾಹಲ್ ಬೌಲಿಂಗ್ ನಲ್ಲಿ ಸ್ಟೀವ್ ಸ್ಮಿತ್ ಪ್ಯಾಡ್ ಗೆ ತಗುಲಿದ ಬಾಲ್ ಸ್ಟಂಪ್ ಹಾದು ಹೋಗುತ್ತಿತ್ತು. ಆದರೆ ವಿಕೆಟ್ ಕೀಪರ್ ಆಗಲೀ ಬೌಲರ್ ಆಗಲೀ ಅಪೀಲ್ ಮಾಡಲೇ ಇಲ್ಲ.
ಕೆಲವೇ ಕ್ಷಣದ ಬಳಿಕ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಪ್ಯಾಡ್ ಗೆ ಬಾಲ್ ಬಡಿದಿತ್ತು. ಆದರೆ ದಿನೇಶ್ ಕಾರ್ತಿಕ್ ಗೆ ಇದು ಖಚಿತವಿರಲಿಲ್ಲ. ಹೀಗಾಗಿ ರೋಹಿತ್ ಡಿಆರ್ ಎಸ್ ಗೆ ಮನವಿ ಮಾಡಿದರು. ಬಳಿಕ ದಿನೇಶ್ ಕಾರ್ತಿಕ್ ತಮಾಷೆಯಾಗಿ ಬೈದು ಅವರ ಕುತ್ತಿಗೆ ಹಿಡಿದು ರೋಹಿತ್ ಸಿಟ್ಟು ತೀರಿಸಿಕೊಂಡರು.