Publish Date: Thu, 27 Sep 2018 (08:57 IST)
Updated Date: Thu, 27 Sep 2018 (08:59 IST)
ದುಬೈ: ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿಗೆ ಏಷ್ಯಾ ಕಪ್ ನ ಈ ಅವೃತ್ತಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳು ಚೆನ್ನಾಗಿ ಆಡಿದರೂ ಸಿಟ್ಟಾಗಿದ್ದಾರೆ.
ರಾಹುಲ್ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಮಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಆದರೆ ರಶೀದ್ ಖಾನ್ ಬೌಲಿಂಗ್ ನಲ್ಲಿ ಸ್ವೀಪ್ ಮಾಡಲು ಹೋಗಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.
ಆದರೆ ಅಂಪಾಯರ್ ತೀರ್ಪನ್ನು ಒಪ್ಪದೇ ಉಳಿದಿದ್ದ ಒಂದೇ ಒಂದು ರಿವ್ಯೂ ಪಡೆದು ತಪ್ಪು ಮಾಡಿದರು. ನಂತರ ಧೋನಿ 8 ರನ್ ಗಳಿಸಿದ್ದಾಗ ಅಂಪಾಯರ್ ಎಲ್ ಬಿ ತೀರ್ಪು ನೀಡಿ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ರಿಪ್ಲೇನಲ್ಲಿ ಧೋನಿ ನಾಟೌಟ್ ಆಗಿದ್ದು ಸ್ಪಷ್ಟವಾಗಿತ್ತು. ಆದರೆ ರಿವ್ಯೂ ಪಡೆಯಲು ಆಗ ಭಾರತದ ಬಳಿ ರಿವ್ಯೂ ಇರಲಿಲ್ಲ. ಹೀಗಾಗಿ ಧೋನಿ ಪೆವಿಲಿಯನ್ ಗೆ ಮರಳಬೇಕಾಯಿತು. ಒಂದು ವೇಳೆ ಧೋನಿ ಕೊನೆಯವರೆಗೂ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಹೀಗಾಗಿಯೇ ನೆಟ್ಟಿಗರು ರಾಹುಲ್ ಮೇಲೆ ರಿವ್ಯೂ ವೇಸ್ಟ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯದ ನಂತರ ಇದರ ಬಗ್ಗೆ ಮಾತನಾಡಿದ ರಾಹುಲ್ ‘ಒಂದು ರಿವ್ಯೂ ಇದ್ದಾಗ ನಾನು ಯೋಚಿಸಿ ಬಳಸಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಅಂತಹ ಪ್ರಮಾದಗಳು ಆಗುತ್ತವೆ. ಬಾಲ್ ಹೊರ ಹೋಗಿರಬಹುದು ಎಂಬ ಭಾವನೆಯಲ್ಲಿ ರಿವ್ಯೂ ಪಡೆದೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.