Publish Date: Thu, 27 Sep 2018 (08:40 IST)
Updated Date: Thu, 27 Sep 2018 (08:44 IST)
ದುಬೈ: ಏಷ್ಯಾ ಕಪ್ ನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡಿದ್ದ ಧೋನಿ ಒಮ್ಮೆ ಕುಲದೀಪ್ ಯಾದವ್ ಮೇಲೆ ಸಿಟ್ಟಿಗೆದ್ದ ಪ್ರಸಂಗವೂ ನಡೆದಿದೆ.
ಕುಲದೀಪ್ ಯಾದವ್ ಓವರ್ ನಡುವೆ ಫೀಲ್ಡಿಂಗ್ ಚೇಂಜ್ ಮಾಡುವಂತೆ ಧೋನಿಗೆ ಸೂಚಿಸುತ್ತಾರೆ. ಆದರೆ ಎಷ್ಟೇ ಹೇಳಿದರೂ ಧೋನಿ ಕಿವಿಗೊಡುವುದಿಲ್ಲ. ಆಗ ಕುಲದೀಪ್ ಯಾದವ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಕ್ಷಣ ಧೋನಿ ‘ಬೌಲಿಂಗ್ ಮಾಡ್ತೀಯಾ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ?’ ಎಂದು ಸಿಟ್ಟಿನಿಂದಲೇ ಕೇಳುತ್ತಾರೆ. ಆಗ ಮರು ಮಾತಾಡದೇ ತಲೆ ತಗ್ಗಿಸಿಕೊಂಡು ಮುಂದಿನ ಬಾಲ್ ಎಸೆಯಲು ಕುಲದೀಪ್ ಸಿದ್ಧವಾಗುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.