Publish Date: Thu, 27 Sep 2018 (08:50 IST)
Updated Date: Thu, 27 Sep 2018 (08:52 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಅಫ್ಘಾನಿಸ್ತಾನ ವಿರುದ್ಧ ಟೈ ಆದ ಪಂದ್ಯದಲ್ಲಿ ಅಂಪಾಯರ್ ಗಳು ನೀಡಿದ ಕೆಲವೊಂದು ತೀರ್ಪುಗಳ ಬಗ್ಗೆ ನಾಯಕ ಧೋನಿ ಅಸಮಾಧಾನ ಹೊರಹಾಕಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಪಂದ್ಯಕ್ಕೆ ನಾಯಕರಾಗಿದ್ದ ಧೋನಿ ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ ಈ ಫಲಿತಾಂಶಕ್ಕೆ ಕೆಲವೊಂದು ಫಲಿತಾಂಶಗಳು ಸರಿಯಾಗಿ ಬಾರದೇ ಇರುವುದೂ ಕಾರಣವಾಯ್ತು. ಆದರೆ ಅದನ್ನು ನಾನು ಹೆಚ್ಚಿಗೆ ಹೇಳಿ ಸುಮ್ಮನೇ ದಂಡನೆಗೊಳಗಾಗಲ್ಲ ಎನ್ನುವ ಮೂಲಕ ಧೋನಿ ಅಸಮಾಧಾನ ಹೊರಹಾಕಿದ್ದಾರೆ.
ಕೆಲವೊಂದು ಎಲ್ ಬಿಡಬ್ಲ್ಯು ತೀರ್ಪುಗಳು ಅಂದುಕೊಂಡಂತೆ ಬರಲಿಲ್ಲ ಎನ್ನುವುದು ಧೋನಿಯ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಿದ್ದರೂ ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎಂದೂ ಧೋನಿ ಸಮಾಧಾನಪಟ್ಟುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.