Select Your Language

Notifications

webdunia
webdunia
webdunia
webdunia

ಏಕದಿನ ಕ್ರಿಕೆಟ್ ನಲ್ಲಿ ಐತಿಹಾಸಿಕ ಮೊತ್ತ ದಾಖಲಿಸಿದ ಇಂಗ್ಲೆಂಡ್

ಏಕದಿನ ಕ್ರಿಕೆಟ್ ನಲ್ಲಿ ಐತಿಹಾಸಿಕ ಮೊತ್ತ ದಾಖಲಿಸಿದ ಇಂಗ್ಲೆಂಡ್
ನಾಟಿಂಗ್ ಹ್ಯಾಮ್ , ಬುಧವಾರ, 20 ಜೂನ್ 2018 (08:39 IST)
ನಾಟಿಂಗ್ ಹ್ಯಾಮ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಐತಿಹಾಸಿಕ ಮೊತ್ತ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ವಿಶ್ವದಾಖಲೆಯ 481 ರನ್ ಗಳಿಸಿತು. ಇದು ಏಕದಿನ ಇತಿಹಾಸದಲ್ಲೇ ಅತ್ಯಧಿಕ ಮೊತ್ತ. ವಿಶೇಷವೆಂದರೆ ಇದಕ್ಕಿಂತ ಮೊದಲು ಇದೇ ಮೈದಾನದಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಗಳಿಸಿದ್ದ 443 ರನ್ ಅತ್ಯಧಿಕ ಮೊತ್ತವಾಗಿತ್ತು. ಈಗ  ಅದನ್ನು ಉತ್ತಮಪಡಿಸಿಕೊಂಡಿತು.

ಇಂಗ್ಲೆಂಡ್ ಪರ ಆರಂಭಿಕ ಬೇರ್ ಸ್ಟೋ 139, ಅಲೆಕ್ಸ್ ಹೇಲ್ಸ್ 147, ಮತ್ತು ಜೇಸನ್ ರಾಯ್ 82 ರನ್ ಸಿಡಿಸಿದರು. ಇವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ವಿಶ್ವದಾಖಲೆಯ ಮೊತ್ತ ನಿರ್ಮಾಣವಾಯಿತು.

ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 239 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಈ ಪಂದ್ಯವನ್ನು ಇಂಗ್ಲೆಂಡ್ 242 ರನ್ ಗಳ ಗೆಲುವು ಸಾಧಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

34 ವರ್ಷಗಳಲ್ಲಿ ಕಾಣದ ಅವಮಾನ ಅನುಭವಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ!