Publish Date: Tue, 19 Jun 2018 (10:25 IST)
Updated Date: Tue, 19 Jun 2018 (10:26 IST)
ಸಿಡ್ನಿ: ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ ತಂಡ ಯಾವತ್ತೂ ಅಗ್ರಗಣ್ಯ ಸ್ಥಾನದಲ್ಲೇ ಇತ್ತು. ಆದರೆ ಇದೇ ಮೊದಲ ಬಾರಿಗೆ 34 ವರ್ಷಗಳಲ್ಲಿ ಕಾಣದ ಅವನತಿ ಕಂಡಿದೆ.
ಇಂಗ್ಲೆಂಡ್ ವಿರುದ್ಧ ಪ್ರಸಕ್ತಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಒಂದರ ಹಿಂದೊಂದರಂತೆ ಸೋಲು ಕಾಣುತ್ತಿರುವ ಆಸೀಸ್ ತಂಡ ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೆ ಕುಸಿದಿದೆ.
ಇದು 34 ವರ್ಷಗಳ ಇತಿಹಾಸದಲ್ಲೇ ಮೊದಲಾಗಿದೆ. ಇದುವರೆಗೆ ಆಸೀಸ್ ಇಷ್ಟು ಕೆಳ ಕ್ರಮಾಂಕಕ್ಕೆ ಇಳಿದಿರಲಿಲ್ಲ. ಸದ್ಯಕ್ಕೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ನಂತಹ ಸ್ಟಾರ್ ಆಟಗಾರರಿಲ್ಲದೇ ಆಸೀಸ್ ತಂಡ ತೀವ್ರ ಕಳಪೆಯಾಗಿದೆ. ಅದರ ಪರಿಣಾಮವೇ ಇದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.