Select Your Language

Notifications

webdunia
webdunia
webdunia
webdunia

ಭಾರತ, ಪಾಕ್ ಪಂದ್ಯವನ್ನು ವೀಕ್ಷಿಸಬೇಡಿ: ಬಿಸಿಸಿಐ ವಿರುದ್ಧ ಪಹಲ್ಗಾಮ್‌ ದಾಳಿಯ ಸಂತ್ರಸ್ತನ ಪತ್ನಿ ಆಕ್ರೋಶ

ಇಂಡಿಯಾ VS ಪಾಕಿಸ್ತಾನ ಪಂದ್ಯ

Sampriya

ಕಾನ್ಪುರ , ಶನಿವಾರ, 13 ಸೆಪ್ಟಂಬರ್ 2025 (16:37 IST)
Photo Credit X
ಕಾನ್ಪುರ (ಉತ್ತರ ಪ್ರದೇಶ): ಭಾನುವಾರ ನಡೆಯಲಿರುವ ಏಷ್ಯಾ ಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಂಬರುವ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಪಹಲ್ಗಾಮ್ ಉಗ್ರರ ದಾಳಿಯ ಸಂತ್ರಸ್ತ ಶುಭಂ ದ್ವಿವೇದಿ ಅವರ ಪತ್ನಿ ಐಶನ್ಯಾ ದ್ವಿವೇದಿ ಕರೆ ನೀಡಿದ್ದಾರೆ. 

ಈ ಪಂದ್ಯವನ್ನು ಬಹಿಷ್ಕರಿಸಿ ಹಾಗೂ ಇದಕ್ಕಾಗಿ ನಿಮ್ಮ ಟಿವಿಯನ್ನು ಆನ್ ಮಾಡಬೇಡಿ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಕ್ರಿಕೆಟ್ ಮಂಡಳಿಯು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಕುಟುಂಬದ ಬಗ್ಗೆ ಭಾವನೆಯನ್ನು ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಒಂದೆರಡು ಕ್ರಿಕೆಟಿಗರನ್ನು ಹೊರತುಪಡಿಸಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಹಿಷ್ಕರಿಸಲು ಯಾವುದೇ ಆಟಗಾರರು ಮುಂದೆ ಬಂದಿಲ್ಲ ಎಂದು ಹೇಳಿಕೊಂಡರು.

ನಮ್ಮ ಕ್ರಿಕೆಟಿಗರು ಏನು ಮಾಡುತ್ತಿದ್ದಾರೆ? ಕ್ರಿಕೆಟಿಗರು ರಾಷ್ಟ್ರೀಯವಾದಿಗಳು ಎಂದು ಹೇಳಲಾಗುತ್ತದೆ.
ಇದನ್ನು ನಮ್ಮ ರಾಷ್ಟ್ರೀಯ ಆಟವಾಗಿ ನೋಡಲಾಗುತ್ತದೆ. 1-2 ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ ಯಾರೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಹೇಳಲು ಮುಂದಾಗಲಿಲ್ಲ. 

ಬಿಸಿಸಿಐ ಅವರನ್ನು ಬಂದೂಕು ಹಿಡಿದು ಆಟವಾಡಲು ಸಾಧ್ಯವಿಲ್ಲ. ಅವರು ತಮ್ಮ ದೇಶಕ್ಕಾಗಿ ಒಂದು ನಿಲುವು ತೆಗೆದುಕೊಳ್ಳಬೇಕು. ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದರು. 

ಪಹಲ್ಗಾಮ್ ದಾಳಿಯ ಸಂತ್ರಸ್ತನ ಪತ್ನಿ ಬಿಸಿಸಿಐಗೆ ಪ್ರಶ್ನೆ ಮಾಡಿ,  26 ಕುಟುಂಬಗಳಿಗೆ ಅವರ ರಾಷ್ಟ್ರೀಯತೆ ಮುಗಿದಿದೆಯೇ ಎಂದು ನಾನು ಪ್ರಾಯೋಜಕರು ಮತ್ತು ಪ್ರಸಾರಕರನ್ನು ಕೇಳಲು ಬಯಸುತ್ತೇನೆ? ಪಂದ್ಯದಿಂದ ಬರುವ ಆದಾಯವನ್ನು ಯಾವುದಕ್ಕೆ ಬಳಸಲಾಗುತ್ತದೆ? ಇದನ್ನು ಪಾಕಿಸ್ತಾನ ಕೇವಲ ಭಯೋತ್ಪಾದನೆಗಾಗಿ ಬಳಸಿಕೊಳ್ಳುತ್ತದೆ. ಅದೊಂದು ಭಯೋತ್ಪಾದಕ ರಾಷ್ಟ್ರ. ನೀವು ಅವರಿಗೆ ಆದಾಯವನ್ನು ಒದಗಿಸುತ್ತೀರಿ ಮತ್ತು ಮತ್ತೊಮ್ಮೆ ನಮ್ಮ ಮೇಲೆ ದಾಳಿ ಮಾಡಲು ಅವರನ್ನು ಸಿದ್ಧಪಡಿಸುತ್ತೀರಿ ಎಂದು ಆಕ್ರೋಶ ಹೊರಹಾಕಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಚಂಡಮಾರುತದಲ್ಲಿ ಸಿಲುಕಿದ ಸಚಿನ್ ಕುಟುಂಬ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್: ಅಪಾಯದಿಂದ ಜಸ್ಟ್‌ಮಿಸ್‌