Daily Horoscope

ಐಪಿಎಲ್ ಗೆ ಮೊದಲು ದೇವರ ದರ್ಶನ: ಪದ್ಧತಿ ಪಾಲಿಸಿದ ಧೋನಿ

Krishnaveni K
ಬುಧವಾರ, 7 ಫೆಬ್ರವರಿ 2024 (14:00 IST)
Photo Courtesy: Twitter
ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಪ್ರತೀ ಬಾರಿ ಐಪಿಎಲ್ ಗೆ ಮೊದಲು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಅದನ್ನು ಈ ಬಾರಿಯೂ ಪಾಲಿಸಿದ್ದಾರೆ.

2024 ರ ಐಪಿಎಲ್ ಗೆ ಧೋನಿ ಇಂದಿನಿಂದ ಅಭ್ಯಾಸ ಆರಂಭಿಸಿದ್ದಾರೆ. ಅದಕ್ಕೆ ಮೊದಲು ಅವರು ರಾಂಚಿಯ ದಿಯೋರಿ ಮಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪ್ರತೀ ಬಾರಿಯೂ ಐಪಿಎಲ್ ಗೆ ಮೊದಲು ಧೋನಿ ಇಲ್ಲಿಗೆ ಭೇಟಿ ನೀಡುತ್ತಾರೆ. ಧೋನಿ ಬಂದಿದ್ದು ನೋಡಿ ಖುಷಿಯಾದ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿ ಸೆಲ್ಫೀ ಪಡೆದುಕೊಂಡರು.  ಆದರೆ ಎಲ್ಲೂ ತಾಳ್ಮೆ ಕಳೆದುಕೊಳ್ಳದ ಧೋನಿ ಎಲ್ಲರೊಂದಿಗೇ ನಗು ನಗುತ್ತಾ ಸೆಲ್ಫೀಗೆ ಪೋಸ್ ಕೊಟ್ಟರು.

ಧೋನಿ ಐಪಿಎಲ್ ತಯಾರಿ ಶುರು
ಇನ್ನು ರಾಂಚಿಯಲ್ಲಿ ದೇವಾಲಯ ಸಂದರ್ಶನ ನಡೆದ ಬೆನ್ನಲ್ಲೇ ಧೋನಿ ಅಭ್ಯಾಸ ಶುರು ಮಾಡಿದ್ದಾರೆ. ರಾಂಚಿಯಲ್ಲಿ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಅಭ್ಯಾಸಕ್ಕಿಳಿದಿದ್ದು ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.

ಇದು ಧೋನಿಗೆ ಕೊನೆಯ ಐಪಿಎಲ್ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಾತನಾಡಿರುವ ಚೆನ್ನೈ ತಂಡದ ಸಿಇಒ ವಿಶ್ವನಾಥನ್, ಇದನ್ನು ಧೋನಿಯೇ ನಿರ್ಧರಿಸುತ್ತಾರೆ ಎಂದಿದ್ದಾರೆ. ಕಳೆ ಬಾರಿಯೂ ಧೋನಿ ಐಪಿಎಲ್ ಆಡುವ ಮುನ್ನ ಇದೇ ಕೊನೆಯ ಐಪಿಎಲ್ ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರು ನನ್ನ ದೇಹ ಸಹಕರಿಸಿದರೆ ಇನ್ನೊಂದು ವರ್ಷ ಐಪಿಎಲ್ ಆಡುವುದಾಗಿ ಹೇಳಿದ್ದರು. ಅದರಂತೆ ಈ ವರ್ಷ ಐಪಿಎಲ್ ಆಡುವುದು ಪಕ್ಕಾ ಆಗಿದೆ. ಆದರೆ ಇದೇ ಕೊನೆಯ ಐಪೆಲ್ ಇರಬಹುದೇ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

Asian Games 2026: ಏಷ್ಯನ್ ಗೇಮ್ಸ್‌ನಲ್ಲಿ ಭಾರತ vs ಜಪಾನ್ ಮಹಿಳಾ ಕ್ರಿಕೆಟ್ ಪಂದ್ಯ; ಸಮಯ, ತಂಡ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

ಮುಂದಿನ ಸುದ್ದಿ
Show comments