Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯಗೆ ಬೈ ಬೈ, ನಮಗೆ ಶಿವಂ ದುಬೆಯೇ ಸಾಕು!

Shivam Dube
Photo Courtesy: Twitter
ಇಂಧೋರ್: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿವಂ ದುಬೆಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
 

ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಇನ್ನು ನಮಗೆ ಬೇಕಾಗಿಲ್ಲ. ನಮಗೆ ಶಿವಂ ದುಬೆಯೇ ಸಾಕು ಎನ್ನುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕರಾಗಿ ರೋಹಿತ್ ಶರ್ಮಾರನ್ನು ಕಿತ್ತೊಗೆದು ಪಾಂಡ್ಯಗೆ ನಾಯಕತ್ವ ನೀಡಿದ ಮೇಲೆ ನೆಟ್ಟಿಗರು ಪಾಂಡ್ಯ ಮೇಲೆ ಕಿಡಿ ಕಾರುತ್ತಲೇ ಇರುತ್ತಾರೆ.

ಇದೀಗ ಅಫ್ಘನ್ ಸರಣಿಯಲ್ಲಿ ಶಿವಂ ದುಬೆ ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿದ್ದು, ಪಾಂಡ್ಯ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ. ಹೀಗಾಗಿ ಅಭಿಮಾನಿಗಳು ಪಾಂಡ್ಯಗೆ ಬೈ ಬೈ ಎನ್ನುತ್ತಿದ್ದಾರೆ.

ಸದ್ಯಕ್ಕೆ ಪಾಂಡ್ಯ ಗಾಯಗೊಂಡು ಹೊರಗುಳಿದಿದ್ದಾರೆ. ಇನ್ನು ಐಪಿಎಲ್ ಆಡಿದ ಮೇಲೆ ಮತ್ತೆ ಗಾಯಗೊಳ್ಳುತ್ತಾರೆ. ಹೀಗಾಗಿ ನಮಗೆ ಟಿ20 ವಿಶ್ವಕಪ್ ಗೆ ಅವರು ಇಲ್ಲದೇ ಇದ್ದರೂ ಯಾವುದೇ ತೊಂದರೆಯಿಲ್ಲ. ಶಿವಂ ದುಬೆ ಸಾಕು ಎನ್ನುತ್ತಿದ್ದಾರೆ. ಮತ್ತೆ ಕೆಲವರು ತಮ್ಮಿಂದ ನಾಯಕತ್ವ ಕಿತ್ತುಕೊಂಡ ಪಾಂಡ್ಯಗೆ ಶಿವಂ ದುಬೆಯನ್ನು ಬೆಳೆಸುವ ಮೂಲಕ ರೋಹಿತ್ ತಕ್ಕ ತಿರುಗೇಟು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

INDVAFG T20I: ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು