ರಾಂಚಿ: ಆಹ್ವಾನವಿದ್ದರೂ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳದ ಧೋನಿ ವಿರುದ್ಧ ನೆಟ್ಟಿಗರು ಭಾರೀ ಟೀಕೆ ಮಾಡಿದ್ದಾರೆ.
ಧೋನಿ ಮನೆಗೆ ಭೇಟಿ ನೀಡಿದ್ದ ರಾಮಜನ್ಮಭೂಮಿ ಟ್ರಸ್ಟ್ ನವರು ಆಹ್ವಾನವಿತ್ತು ಕಾರ್ಯಕ್ರಮಕ್ಕೆ ಬರಲು ತಿಳಿಸಿದ್ದರು. ಆದರೆ ಧೋನಿ ನಿನ್ನೆಯ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹೀಗಾಗಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ‍್ಯೆಗೆ ಹೋಗಿದ್ದು ಬಿಡಿ, ಆ ಬಗ್ಗೆ ಒಂದು ಪೋಸ್ಟ್ ಕೂಡಾ ಹಾಕಿಲ್ಲ. ಗೆಳೆಯರ ಜೊತೆಗೆ ಕ್ರಿಸ್ ಮಸ್, ನ್ಯೂ ಇಯರ್ ಎಂದು ಪಾರ್ಟಿ ಮಾಡುವುದು, ಅವುಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಆಧರೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲೂ ಕಷ್ಟವೇ. ರವೀಂದ್ರ ಜಡೇಜಾರಂತಹ ಸಕ್ರಿಯ ಕ್ರಿಕೆಟ್ ಆಟಗಾರ, ಇಂಗ್ಲೆಂಡ್ ಸರಣಿ ಬ್ಯುಸಿ ನಡುವೆಯೂ ಕಾರ್ಯಕ್ರಮಕ್ಕೆ ಬಂದಿದ್ದರು. ಕೊಹ್ಲಿ ಅಯೋಧ್ಯೆಗೆ ಬಂದು ಕೊನೆ ಕ್ಷಣದಲ್ಲಿ ಕೌಟುಂಬಿಕ ಕಾರಣದಿಂದ ತೆರಳಿದ್ದರು. ಆದರೆ ಧೋನಿಗೆ ನಿವೃತ್ತಿಯಾದರೂ ಕಾರ್ಯಕ್ರಮಕ್ಕೆ ಬರಲು ಕಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಯೋಧ‍್ಯೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ರಿಕೆಟಿಗರ ಸಾಲಿನಲ್ಲಿ ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ರವೀಂದ್ರ ಜಡೇಜಾ, ವೆಂಕಟೇಶ್ ಪ್ರಸಾದ್ ಮುಂತಾದವರು ಬಂದಿದ್ದರು.