Select Your Language

Notifications

webdunia
webdunia
webdunia
webdunia

ಟೆಸ್ಟ್ ಸರಣಿಗೆ ಮುನ್ನ ವಿರಾಟ್ ಕೊಹ್ಲಿಯನ್ನು ಕೆಣಕಿದ ಇಂಗ್ಲೆಂಡ್ ನ ಒಲಿ ರಾಬಿನ್ಸನ್

Virat Kohli

Krishnaveni K

ಮುಂಬೈ , ಶನಿವಾರ, 20 ಜನವರಿ 2024 (13:27 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ಇಂಗ್ಲೆಂಡ್ ಬೌಲರ್ ಒಲಿ ರಾಬಿನ್ಸನ್ ಕಿಂಗ್ ಕೊಹ್ಲಿಗೆ ಸವಾಲು ಹಾಕಿದ್ದಾರೆ.

ಇದೇ ಮೊದಲ ಬಾರಿಗೆ ರಾಬಿನ್ಸನ್ ಭಾರತಕ್ಕೆ ಟೆಸ್ಟ್ ಸರಣಿ ಆಡಲು ಬರುತ್ತಿದ್ದಾರೆ. ಜನವರಿ 25 ರಿಂದ ಹೈದರಾಬಾದ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಮೊದಲು ಅವರು ಕಿಂಗ್ ಕೊಹ್ಲಿಯನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

‘ಭಾರತದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿಯ ಪ್ರತಿಷ್ಠೆಗೆ ಸವಾಲು ಹಾಕಲು ಕಾಯುತ್ತಿದ್ದೇನೆ. ಈ ಮೊದಲು ಅವರು ಇಂಗ್ಲೆಂಡ್ ಗೆ ಬಂದಿದ್ದಾಗ ಅವರಿಗೆ ಬೌಲಿಂಗ್ ಮಾಡಲು ಖುಷಿಯಾಗಿತ್ತು. ಮತ್ತೊಮ್ಮೆ ಅವರ ಜೊತೆ ಕಾದಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮೂರು ಬಾರಿ ರಾಬಿನ್ಸನ್ ಗೆ ವಿಕೆಟ್ ಒಪ್ಪಿಸಿದ್ದರು. ಅದೇ ಆತ್ಮವಿಶ್ವಾಸದಿಂದ ಅವರು ಈಗ ಕೊಹ್ಲಿಗೆ ಸವಾಲು ಹಾಕಿದ್ದಾರೆ. ಆದರೆ ಕೊಹ್ಲಿ ಸವಾಲು ಹಾಕಿದರೆ ಆ ಬೌಲರ್ ಗೆ ಅವರು ಯಾವ ಗತಿ ಕಾಣಿಸುತ್ತಾರೆಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ರಾಬಿನ್ಸನ್-ಕೊಹ್ಲಿ ಕದನ ವೀಕ್ಷಿಸಲು ಪ್ರೇಕ್ಷಕರು ಕಾತುರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಸಾನಿಯಾ ಮಿರ್ಜಾಗೆ ತಲಾಖ್, ಪಾಕ್ ನಟಿಯ ಮದುವೆಯಾದ ಶೊಯೇಬ್ ಮಲಿಕ್