Select Your Language

Notifications

webdunia
webdunia
webdunia
webdunia

ಅಯೋಧ್ಯೆಗೆ ತೆರಳಲು ವಿರಾಟ್ ಕೊಹ್ಲಿ, ಅಶ್ವಿನ್ ಗೆ ಬೇಕು ಬಿಸಿಸಿಐ ಒಪ್ಪಿಗೆ!

Virat Kohli Anushka Sharma

Krishnaveni K

ಮುಂಬೈ , ಶನಿವಾರ, 20 ಜನವರಿ 2024 (09:20 IST)
ಮುಂಬೈ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಗೆ ಆಹ್ವಾನ ನೀಡಲಾಗಿದೆ.

ವಿರಾಟ್ ಮತ್ತು ಅನುಷ್ಕಾ ದಂಪತಿಯನ್ನು ರಾಮಜನ್ಮಭೂಮಿ ಟ್ರಸ್ಟ್ ಖುದ್ದಾಗಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದೆ. ಹೀಗಾಗಿ ಈಗ ವಿರಾಟ್ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆಯೇ ಎಂಬ ಅನುಮಾನ ಮೂಡಿದೆ. ಇದಾದ ಬಳಿಕ ನಿನ್ನೆ ರವಿಚಂದ್ರನ್ ಅಶ್ವಿನ್ ಗೂ ಆಹ್ವಾನ ನೀಡಲಾಗಿದೆ.

ಜನವರಿ 25 ರಿಂದ ಹೈದರಾಬಾದ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಜೊತೆ ವಿರಾಟ್ ಕೊಹ್ಲಿ  ಮತ್ತು ಅಶ್ವಿನ್ ಹೈದರಾಬಾದ್ ನಲ್ಲಿರಲಿದ್ದಾರೆ.

ಹೀಗಾಗಿ ಕೊಹ್ಲಿ, ಅಶ್ವಿನ್ ತಂಡ ಬಿಟ್ಟು ಅಯೋಧ್ಯೆಗೆ ತೆರಳಬೇಕಾದರೆ ಬಿಸಿಸಿಐ ಒಪ್ಪಿಗೆ ಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ತೆರಳಲು ಕೊಹ್ಲಿಗೆ ಒಪ್ಪಿಗೆ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ. ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅನೇಕ ವಿಐಪಿಗಳು ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋದ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವ ಕ್ರಿಕೆಟಿಗರ ಪಟ್ಟಿ