Select Your Language

Notifications

webdunia
webdunia
webdunia
webdunia

ಅಯೋದ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವ ಕ್ರಿಕೆಟಿಗರ ಪಟ್ಟಿ

Sachin Tendulkar

Krishnaveni K

ಮುಂಬೈ , ಶನಿವಾರ, 20 ಜನವರಿ 2024 (09:03 IST)
ಮುಂಬೈ: ಅಯೋಧ್ಯೆಯಲ್ಲಿ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವ ಕ್ರಿಕೆಟಿಗರು ಯಾರೆಲ್ಲಾ ಎಂಬ ಪಟ್ಟಿ ಇಲ್ಲಿದೆ.

ಸಚಿನ್ ತೆಂಡುಲ್ಕರ್ ಗೆ ಮೊದಲನೆಯದಾಗಿ ಆಹ್ವಾನ ನೀಡಲಾಗಿತ್ತು. ಕ್ರಿಕೆಟ್ ದೇವರು ಸಚಿನ್ ರನ್ನು ರಾಮ ಜನ್ಮಭೂಮಿ ಅವರ  ಮನೆಗೆ ತೆರಳಿ ಆಹ್ವಾನ ನೀಡಿತ್ತು. ಎಲ್ಲಾ ಸೆಲೆಬ್ರಿಟಿಗಳಿಗೂ ಅವರ ಮನೆಗೆ ತೆರಳಿ ಆಹ್ವಾನ ನೀಡಲಾಗಿದೆ.

ಸಚಿನ್ ಬಳಿಕ ಆಹ್ವಾನ ಸ್ವೀಕರಿಸಿದವರು ಧೋನಿ. ವಿಶ್ವಕಪ್ ವಿಜೇತ ನಾಯಕನನ್ನು ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ. ಅವರ ನಂತರ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾಗೆ ಆಹ್ವಾನ ಪತ್ರಿಕೆ ನೀಡಲಾಗಿದೆ.

ಇದೀಗ ನಿನ್ನೆಯಷ್ಟೇ ತಮಿಳುನಾಡು ಮೂಲದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಗೂ ರಾಮಜನ್ಮಭೂಮಿ ಟ್ರಸ್ಟ್ ಆಹ್ವಾನವಿತ್ತಿದೆ. ಈ ಪೈಕಿ ವಿರಾಟ್ ಮತ್ತು ಅಶ‍್ವಿನ್ ಹಾಲಿ ಕ್ರಿಕೆಟಿಗರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಐತಿಹಾಸಿಕ ಗಬ್ಬಾ ಟೆಸ್ಟ್ ಇನಿಂಗ್ಸ್ ನೆನಪಿದ್ಯಾ?